ಲೆಬನಾನ್/ಇಸ್ರೇಲ್: ಅಮೆರಿಕ, ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿಯನ್ನು ಮುಂದುವರಿಸಿದ್ದು, ಇರಾನ್ ಗೆ ಬೆಂಬಲವಾಗಿ ಹೆಜ್ಬುಲ್ಲಾ ಪಡೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಪರಿಣಾಮ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 31 ಜನರು ಸಾವಿಗೀಡಾಗಿರುವುದಾಗಿ ಲೆಬನಾನ್ ಆರೋಗ್ಯ ಸಚಿವಾಲಯ ಸೋಮವಾರ (ಮಾ.02) ತಿಳಿಸಿದೆ.

ಇರಾನ್ ಅನ್ನು ಗುರಿಯಾಗಿರಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿಯನ್ನು ಆರಂಭಿಸಿದ ನಂತರ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ, ಬಾಂಬ್ ಗಳ ಸುರಿಮಳೆ ಮುಂದುವರಿದಿದೆ. ಅಲ್ಲದೇ ಹೆಬ್ಬುಲ್ಲಾ ದಾಳಿ ಹಾಗೂ ಇಸ್ರೇಲ್ ಪಡೆಯ ಪ್ರತೀಕಾರದ ದಾಳಿಯ ಪರಿಣಾಮ ಅಪಾರ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯಲ್ಲಿ 149 ಜನರು ಗಾಯಗೊಂಡಿರುವುದಾಗಿ ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಕುವೈತ್ ಮೇಲೂ ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕುವೈತ್ ನಲ್ಲಿರುವ ಅಮೆರಿಕ ಪ್ರಜೆಗಳು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕೆಂದು ಅಮೆರಿಕ ಸಂದೇಶವನ್ನು ರವಾನಿಸಿದೆ.




