ಮಧ್ಯಪ್ರಾಚ್ಯ ಯುದ್ಧದ ಬಿಸಿ ಈಗ ಪಾಕಿಸ್ತಾನಕ್ಕೂ ತಟ್ಟಿದ್ದು, ಪೆಟ್ರೋಲ್ ಬೆಲೆ ಶೇ.42.7 ರಷ್ಟು ಹಾಗೂ ಡೀಸೆಲ್ ಬೆಲೆ ಶೇ.54.9 ರಷ್ಟು ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಇಂಧನಗಳು ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್ ದರ *151.88, ಡೀಸೆಲ್ ₹172.25 ಏರಿಕೆ ಕಂಡಿದೆ.

ಇದರಿಂದ ಸದ್ಯ ಪಾಕ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹458.40 ಹಾಗೂ ಡೀಸೆಲ್ ದರ 520.35 ರೂ.ಗೆ ಏರಿಕೆಯಾಗಿದೆ. ಸಂಪನ್ಮೂಲ ಸೀಮಿತವಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಅಲ್ಲಿನ ಸಚಿವರು ತಿಳಿಸಿದ್ದಾರೆ.




