ಕೆಟ್ಟ ರಸ್ತೆಯಿಂದ ಬೆಂಗಳೂರು ತೊರೆಯಲು ಮುಂದಾದ 10,900 ಕೋಟಿ ಮೌಲ್ಯದ BlackBuck ಕಂಪನಿ

Share with

ಬೆಂಗಳೂರು: ಭಾರತದ ಪ್ರಮುಖ ಟ್ರಕ್‌ ಡಿಜಿಟಲ್ ಟ್ರ್ಯಾಕಿಂಗ್‌ ಪ್ಲಾಟ್‌ಫಾರ್ಮ್‌ ಬ್ಲ್ಯಾಕ್‌ಬಕ್ ಕಂಪನಿ ಕೆಟ್ಟ ರಸ್ತೆಯ ಕಾರಣ ನೀಡಿ ಬೆಂಗಳೂರನ್ನು ತೊರೆಯುವ ಎಚ್ಚರಿಕೆ ನೀಡಿದೆ.

ಸುಮಾರು ಒಂದು ದಶಕದ ಕಾರ್ಯಾಚರಣೆಯ ನಂತರ ಬೆಳ್ಳಂದೂರಿನಲ್ಲಿರುವ ತನ್ನ ಔಟರ್ ರಿಂಗ್ ರೋಡ್ (ORR) ಕಚೇರಿಯನ್ನು ತೊರೆಯುವುದಾಗಿ 10,900 ಕೋಟಿ ರೂ. ಮೌಲ್ಯದ ಬ್ಲ್ಯಾಕ್‌ಬಕ್ ಕಂಪನಿಯ ಸಿಇಒ ರಾಜೇಶ್ ಯಬಜಿ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು ಬೆಳ್ಳಂದೂರು ಕಳೆದ 9 ವರ್ಷಗಳಿಂದ ನಮ್ಮ ಕಚೇರಿ + ಮನೆ ಆಗಿತ್ತು. ಆದರೆ ಇನ್ನು ಮುಂದೆ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ನಾವು ಇಲ್ಲಿಂದ ಹೊರಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.



Share with

Leave a Reply

Your email address will not be published. Required fields are marked *