ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಅದಮ್ಯ ಚೇತನ ಸಂಸ್ಥೆಯಿಂದ 12 ಸಾವಿರ ಸ್ಟೀಲ್ ತಟ್ಟೆ

Share with

ಬೆಂಗಳೂರು: ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಅದಮ್ಯ ಚೇತನ ಸಂಸ್ಥೆಯು 12 ಸಾವಿರ ಸ್ಟೈನ್‌ಲೆಸ್ ಸ್ಟೀಲ್ ತಟ್ಟೆಗಳನ್ನು ಕಳುಹಿಸಿಕೊಡುತ್ತಿದೆ.

ಅನಂತ ಪ್ಲೇಟ್ ಬ್ಯಾಂಕ್ ಯೋಜನೆಯ ಮೂಲಕ ಬಳಸಿ ಎಸೆಯುವ ತಟ್ಟೆಗಳ ಬದಲು ಮರುಬಳಕೆಯ ತಟ್ಟೆಗಳನ್ನು ಒದಗಿಸುತ್ತಿದೆ. ಇದರಿಂದ ನೂರಾರು ಟ್ರಕ್ ಲೋಡ್‌ಗಳಷ್ಟು ಕಸ ಉತ್ಪತ್ತಿಯಾಗುವುದನ್ನು ತಡೆಗಟ್ಟಲಾಗುತ್ತಿದೆ. ಉಡುಪಿ ನಗರವನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ಇದು ನಮ್ಮ ಒಂದು ಪುಟ್ಟ ಕಾಣಿಕೆ ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಉಚಿತವಾಗಿ ತಟ್ಟೆಗಳನ್ನು ಪಡೆಯಲು ಅಥವಾ ನಿಮ್ಮ ಪ್ರದೇಶದಲ್ಲಿ ಪ್ಲೇಟ್ ಬ್ಯಾಂಕ್ ಪ್ರಾರಂಭಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ www.adamyachetana.org ಗೆ ಭೇಟಿ ನೀಡಬಹುದು.


Share with

Leave a Reply

Your email address will not be published. Required fields are marked *