ಏಪ್ರಿಲ್ 20 ರಂದು ಧೂಮಾವತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕಣ್ಣೂರು ಇದರ 20ನೇ ವಾರ್ಷಿಕೋತ್ಸವ

Share with

20th Anniversary of Dhoomavathi Arts & Sports Club (R) Kannur

ಕಣ್ಣೂರು: ಧೂಮಾವತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕಣ್ಣೂರು ಇದರ 20ನೇ ವಾರ್ಷಿಕೋತ್ಸವವು ಏಪ್ರಿಲ್ 20 ರಂದು ಶನಿವಾರ ಕ್ಲಬ್ಬಿನ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿರುವುದು.

ವಾರ್ಷಿಕೋತ್ಸವದ ಪ್ರಯುಕ್ತ ಏಪ್ರಿಲ್ 20 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಂಜೆ 7 ರಿಂದ 8 ರ ವರೆಗೆ ಊರಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಲಿದ್ದು, ಬಳಿಕ ಧೂಮಾವತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕಣ್ಣೂರು ಇದರ ಅಧ್ಯಕ್ಷರಾದ ಶ್ರೀ ಸನತ್ ಕುಮಾರ್ ಸಿದ್ದಿಬಯಲು ಅವರ ಅಧ್ಯಕ್ಷತೆಯಲ್ಲಿ 8 ರಿಂದ 9 ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತಿಗೆ ಗ್ರಾಮಪಂಚಾಯತ್ 9ನೇ ವಾರ್ಡು ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕಣ್ಣೂರು ಇವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಎಲ್.ಪಿ.ಎಸ್ ಕಣ್ಣೂರು ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಜ್ಯೋತಿ ಎನ್., ನಿವೃತ್ತ ಅಧ್ಯಾಪಕರು ಶ್ರೀ ರಾಮಚಂದ್ರ ಭಟ್ ಮದನಗುಳಿ, ಜಿ.ಎಸ್.ಬಿ.ಎಸ್ ಕುಂಬಳೆ ಇದರ ಅಧ್ಯಾಪಕರು ಶ್ರೀ ಬಾಬು ಮಾಸ್ಟರ್ ಸಿದ್ದಿಬಯಲು, ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರ ಅನಂತಪುರ ಇದರ ಟ್ರಸ್ಟಿ ಬೋರ್ಡ್ ಅಧ್ಯಕ್ಷರಾದ ಕುಶಾಲಪ್ಪ ಪೂಜಾರಿ ಕಣ್ಣೂರು, ಶ್ರೀ ಆಶ್ರಫ್ ಎನ್.ಬಿ ಕಣ್ಣೂರು ಹಾಗೂ ಶ್ರೀ ಕೃಷ್ಣ ಆಳ್ವ ನಾವೂರು ಉಪಸ್ಥಿತಲಿರುವರು.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿರುವುದು. ಬಳಿಕ ರಾತ್ರಿ 10.00 ಗಂಟೆಗೆ ಸರಿಯಾಗಿ ಕ್ಲಬ್ ಪರಿಸರದಲ್ಲಿ ಶಿವಾನಂದ ಶೆಟ್ಟಿ ಸಾರಥ್ಯದಲ್ಲಿ ಅಮೃಕಲಾವಿದೆರ್ ಕುಡ್ಲ ಇವರು ಅಭಿನಯಿಸುವ, ರಂಗ್‌ದ ರಾಜೆ ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ, ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯದ ತುಳು ಹಾಸ್ಯಮಯ ನಾಟಕ ʼಅಮ್ಮೆರ್‌ʼ ಪ್ರದರ್ಶನ ಕಾಣಲಿರುವುದು.


Share with

Leave a Reply

Your email address will not be published. Required fields are marked *