ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮಕ್ರಿ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಉರಗ ರಕ್ಷಕ ಪವನ ನಾಯ್ಕ್ ಅವರು 9.6 ಅಡಿ ಉದ್ದದ ಅಪರೂಪದ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿದ್ದು, ಸಮೀಪದ ಮನೆಯ ಆರ್ಟಿಓ ಆಫೀಸ್ ಹೋಮ್ಗಾರ್ಡ್ ಗಣೇಶ್ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.
ಕಳೆದ ವರ್ಷ ಮಿರ್ಜಾನ್ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು, ಭಯಬೀತರಾಗಿ ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಬಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದೆ. ಈ ಮೂಲಕ ಭಾರತದಲ್ಲೇ ಅತೀದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಸಿಕ್ಕಿದೆ.