ಐಲ ಮೈದಾನಿನಲ್ಲಿ ೩೧ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಉತ್ಸವ

Share with

ಉಪ್ಪಳ: ಸಾರ್ವಜನಿಕ ಮೊಸರುಕುಡಿಕೆ ಸಮಿತಿ ಐಲ ಮೈದಾನ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ೩೧ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ವಿವಿಧ ಸ್ಪರ್ಧೆಗಳೊಂದಿಗೆ  ಈ ತಿಂಗಳ ೨೬ರಂದು ಐಲ ಮೈದಾನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ೭ಕ್ಕೆ ಐಲ ಕ್ಷೇತ್ರದಲ್ಲಿ ಪ್ರಾರ್ಥನೆ, ೯ಗಂಟೆಗೆ ಪುಟಾಣಿಗಳಿಂದ ದೀಪ ಪ್ರಜ್ವಲನೆ, ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ಗಂಟೆ ತನಕ ವಿವಿಧ ಮಂಡಳಿಗಳಿAದ ಭಜನಾ ಸೇವೆ,  ಮಧ್ಯಾಹ್ನ ೨.೩೦ರ ಬಳಿಕ  ಆಟೋಟ ಸ್ಪರ್ಧೆಗಳು, ಭ್ರಾಮರಿ ಕುಣಿತಾ ಭಜನಾ ತಂಡ ಇವರಿಂದ ಕುಣಿತಾ ಭಜನೆ, ಸಂಜೆ ೬ಕ್ಕೆ ಬಾಲಕೃಷ್ಣ ವೇಶ ಸ್ಪರ್ಧೆ, ರಾತ್ರಿ ೭ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಐಲ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಲಕ್ಷ÷್ಮಣ್ ಕುಂಬ್ಳೆ ಅಧ್ಯಕ್ಷತೆ ವಹಿಸುವರು. ವಿಶ್ವಹಿಂದೂ ಪರಿಷತ್ ಗ್ರಾಮಾಂತರ ಕಾಸರಗೋಡು ಪ್ರಖಂಡ ಅಧ್ಯಕ್ಷ ವಾಮನ ಆಚಾರ್ಯ ಬೋವಿಕ್ಕಾನ ಧಾರ್ಮಿಕ ಭಾಷಣ ಮಾಡುವರು. ಉದ್ಯಮಿ ಶಶಿಧರ ಪೂಂಜ ಕೊಂಡೆವೂರು, ತಲಪಾಡಿ ಫಲಾಹ ಗರ್ಲ್್ಸ ಕಾಲೇಜ್ ಉಪನ್ಯಾಸಕಿ ಆಶಾ ಸಂದೀಫ್ ಉಪಸ್ಥಿತರಿರುವರು. ರಾತ್ರಿ ೮ರಿಂದ ಊರ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.


Share with

Leave a Reply

Your email address will not be published. Required fields are marked *