ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಜನವರಿ ತಿಂಗಳಿಂದ ಜೂನ್ ಆರಂಭದವರೆಗೆ ಡೆಂಗ್ಯೂ ಜ್ವರದ ಕೇವಲ 2 ಪ್ರಕರಣಗಳು ದಾಖಲಾಗಿದ್ದವು. ಆದರೆ ಜೂನ್ ಮತ್ತು ಜುಲೈ 10ನೇ ತಾರೀಕಿನ ವರೆಗೆ 32 ಪ್ರಕರಣಗಳು ದಾಖಲಾಗಿ, ಒಟ್ಟು 6 ತಿಂಗಳಲ್ಲಿ 34 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ತಾಲೂಕಿನಲ್ಲಿ ಈ ವರೆಗೆ ಒಟ್ಟು 488 ವಿವಿಧ ರೀತಿಯ ಜ್ವರ ಪ್ರಕರಣಗಳು ದಾಖಲಾಗಿವೆ.
ಜ್ವರ ಬಂದು ಡೆಂಗ್ಯೂ ಸಂಬಂಧಿಸಿ ಪರೀಕ್ಷೆ ನಡೆಸಲು ಖಾಸಗಿ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಲ್ಲಿ ಎನ್‌ಎಸ್-1 ಪಾಸಿ ಟಿವ್ ಅಥವಾ ನೆಗೆಟಿವ್ ವರದಿ ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸ ಲಾಗಿದೆ. ತಾಲೂಕಿನ ಪಡಂಗಡಿ, ವೇಣೂರು, ಇಂದಬೆಟ್ಟು, ನಡ, ಕುವೆಟ್ಟು, ಉಜಿರೆ, ಬೆಳ್ತಂಗಡಿ ಗ್ರಾಮಗಳಲ್ಲಿ ಜ್ವರ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿವೆ.