ರಾಯಚೂರು: ಗುರುಸಾರ್ವಭೌಮ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯದಲ್ಲಿ ನಡೆದ ಸಮಾರಂಭದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಇಬ್ಬರು ಸಾಧಕರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರು ಕಾಶಿಯ ಪಂಡಿತ ರಾಜಾರಾಮ್ಮು ಶುಕ್ಲ ಅವರಿಗೆ ₹1.50 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿದರೆ, ಕೊಯಮತ್ತೂರಿನ ಪಿ.ಆರ್.ವಿಠಲ್ ಅವರಿಗೆ ₹1 ಲಕ್ಷ ನಗದು ಹಾಗೂ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರಶಸ್ತಿ ಕೊಡಮಾಡಿದರು.

ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಇಬ್ಬರು ಸಾಧಕರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.




