ನಿಯಮ ಉಲ್ಲಂಘಿಸಿ ದಾಸ್ತಾನು ಇರಿಸಿದ್ದ 38 ಕೆ.ಜಿ ಸ್ಫೋಟಕ ವಸ್ತು ವಶ

Share with

ಕಾರ್ಕಳ: ಅಂಗಡಿಯೊಂದರಲ್ಲಿ ನಿಯಮ ಉಲ್ಲಂಘಿಸಿ ದಾಸ್ತಾನು ಇರಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ ಸ್ಫೋಟಕ ವಸ್ತುಗಳನ್ನು ಕಾರ್ಕಳ ಪೊಲೀಸರು ನ.11ರಂದು ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಸಚ್ಚರಿಪೇಟೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಸ್ಫೋಟಕ ನಿಯಮಗಳ ಪ್ರಕಾರ ಪರವಾನಿಗೆ ಪಡೆದುಕೊಂಡು ಕೆಮಿಕಲ್ ಕಡಿಮೆ ಇರುವ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಬೇಕಾಗಿದ್ದು, ಅದಕ್ಕೆ ಪ್ರತ್ಯೇಕವಾದ ಗೋಡಾನ್ ಮಾಡಿ 7 ಅಡಿ ಎತ್ತರದ ಕಂಪೌಂಡನ್ನು ಗೋಡಾನಿನ ಸುತ್ತಲೂ ನಿರ್ಮಿಸಬೇಕಾಗಿದೆ. ಅಲ್ಲದೆ ಗೋಡಾನಿನ ಸುತ್ತಲೂ 100 ಮೀಟರ್ ದೂರದಲ್ಲಿ ಯಾವುದೇ ವಾಸದ ಮನೆಗಳು ಇರದಂತೆ ನಿಯಮಗಳಿವೆ.

ಈ ನಿಯಮಗಳನ್ನು ಉಲ್ಲಂಘಿಸಿ ಶ್ರೀನಿವಾಸ ಕಾಮತ್(50) ಅವರು ಸಚ್ಚರಿಪೇಟೆಯಲ್ಲಿರುವ ಜನರಲ್ ಸ್ಟೋರ್ಸ್‌ನಲ್ಲಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಇರಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ದಾಳಿ ನಡೆಸಿ ಸುಮಾರು 41,370 ರೂಪಾಯಿ ಮೌಲ್ಯದ 38 ಕೆ.ಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.


Share with

Leave a Reply

Your email address will not be published. Required fields are marked *