ಕೊಚ್ಚಿ : ಶಬರಿಮಲೆಯ ಗರ್ಭಗುಡಿ ದ್ವಾರದ ಇಕ್ಕೆಲಗಳಲ್ಲಿರುವ ದ್ವಾರಪಾಲಕ ವಿಗ್ರಹಕ್ಕೆ ಲೇಪಿಸಲ್ಪಟ್ಟಿದ್ದ ಸ್ವರ್ಣ ಕವಚದಲ್ಲಿ 4ಕಿಲೋ ಚಿನ್ನ ನಿಗೂಢವಾಗಿ ಕಡಿಮೆಯಾಗಿದೆ. ಸ್ವರ್ಣ ಲೇಪನದ ತೂಕ ಕಡಿಮೆಯಾದ ಘಟನೆಯ ಕುರಿತು ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಇದರಂತೆ ವಿಜಿಲೆನ್ಸ್ ತನಿಖೆ ಆರಂಭಗೊಂಡಿದೆ.

2019ರಲ್ಲಿ ಸ್ವರ್ಣ ಕವಚ ಕಳಚಿದಾಗ ಅದು 42ಕಿಲೋ ತೂಕ ಇತ್ತು. ಆದರೆ ಕಳೆದ ವಾರ ದುರಸ್ತಿಗೆಂದು ಚೆನ್ನೈ ಗೆ ಕೊಂಡೊಯ್ದಿದ್ದ ವೇಳೆ 38ಕಿಲೋ ತೂಕ ಇತ್ತು. ಈ ಕುರಿತು ಹೈಕೋರ್ಟು ಮಧ್ಯಪ್ರವೇಶಿಸಿ ದೇವಸ್ವಂ ವಿಜಿಲೆನ್ಸ್ ತನಿಖೆಗೆ ಆದೇಶಿಸಿದೆ. ಸ್ವರ್ಣ ಕವಚದ ತೂಕದ ಕೊರತೆ ಹೇಗೆ ಸಂಭವಿಸಿತು ಮತ್ತು ದೇವಸ್ವಂ ಮಂಡಳಿ ಯಾಕೆ ಇದನ್ನು ಹೈಕೋರ್ಟು ಗಮನಕ್ಕೆ ತರಲಿಲ್ಲ ಎಂದು ಹೈಕೋರ್ಟು ಪ್ರಶ್ನಿಸಿದೆ.




