ತಮಿಳು ನಟ, ವಿಧಾನಸಭೆಯ ಮಾಜಿ ಸದಸ್ಯನ ಬ್ಯಾಗ್ ನಲ್ಲಿ 40 ಗುಂಡು ಪತ್ತೆ..!

Share with

ವಿಧಾನಸಭೆಯ ಮಾಜಿ ಸದಸ್ಯ ಹಾಗೂ ನಟ ಕರುಣಾಸ್ ಅವರ ಬ್ಯಾಗ್ ನಲ್ಲಿ ಜೀವಂತ ಮದ್ದು ಗುಂಡುಗಳು ಪತ್ತೆಯಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ
ಈ ಘಟನೆ ನಡೆದಿದೆ.

ನಟ ಕರುಣಾಸ್ ಅವರು ಚೆನ್ನೈನಿಂದ ತಿರುಚ್ಚಿಗೆ ಪ್ರಯಾಣಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಟನ ಬ್ಯಾಗ್ ನಲ್ಲಿ ಎರಡು ಮದ್ದುಗುಂಡುಗಳ ಪೆಟ್ಟಿಗೆಗಳು ಇರುವುದು ಬೆಳಕಿಗೆ ಬಂದಿದೆ. ಬ್ಯಾಗ್ ನಲ್ಲಿ ಒಟ್ಟು 40 ಮದ್ದುಗುಂಡುಗಳು ಪತ್ತೆಯಾಗಿದ್ದು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಮ್ಮ ಬಳಿ ಗನ್ ಲೈಸೆನ್ಸ್ ಇದ್ದು, ವಿಮಾನದಲ್ಲಿ ಬಂದೂಕು ತರಬಾರದು ಎಂಬ ಅರಿವಿದ್ದ ಕಾರಣ ಬುಲೆಟ್ ಮಾತ್ರ ಇದೆ ಎಂದು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಕರುಣಾಸ್ ವಿವರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಮನೆಯಿಂದ ಅವಸರವಾಗಿ ಹೊರಟಿದ್ದ ಕಾರಣ ಬ್ಯಾಗ್‌ನಲ್ಲಿದ್ದ ಗುಂಡುಗಳು ಅವರ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಕರುಣಾಸನ್ ರವರನ್ನು ವಿಚಾರಣೆ ನಡೆಸಿ ಬಿಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯಿಂದಾಗಿ ತಿರುಚ್ಚಿಗೆ ತೆರಳುವ ವಿಮಾನ ಸುಮಾರು ಅರ್ಧ ಗಂಟೆ ತಡವಾಗಿತ್ತು.


Share with

Leave a Reply

Your email address will not be published. Required fields are marked *