ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸಂಗಡಿ ಇದರ ಆಶ್ರಯದಲ್ಲಿ 44ನೇ ವರ್ಷದ ಮಂಜೇಶ್ವರ ಗಣೇಶೋತ್ಸವ ಸೆಪ್ಟಂಬರ್ 7ರಿಂದ 10ರ ತನಕ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 7ರಂದು ಬೆಳಿಗ್ಗೆ 7.30ಕ್ಕೆ ಸಮೂಹಿಕ ಪ್ರಾರ್ಥನೆ, 8ಕ್ಕೆ ಗಣಹೋಮ, ಗೌರೀಪೂಜೆ, 9ಕ್ಕೆ ಶ್ರೀ ಗಣಪತಿ ದೇÃವರ ಪ್ರತಿಷ್ಟೆ, 9.15ಕ್ಕೆ ವೈದ್ಯಾಧಿಕಾರಿ ಡಾ.ಪ್ರಭಾಕರ.ಎಂ ರವರಿಂದ ದೀಪಪ್ರಜ್ವಲನೆ, 9.30ಕ್ಕೆ ದ್ವಜಾರೋಹಣ, 10ಕ್ಕೆ ಸ್ಯಾಕ್ಸೋಪೋನ್ ವಾದನ, 10.30ಕ್ಕೆ ವಿವಿಧ ಆಟೋಟ ಸ್ಪರ್ಧೆಗಳು ಆರಂಭ, 11ಗಂಟೆಗೆ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2ರಿಂದ ಸಂಜೆ 5ರ ತನಕ ವಿವಿಧ ಸ್ಪರ್ಧೆಗಳು, ಸಂಜೆ 6ಕ್ಕೆ ಕುಣಿತ ಭಜನೆ, ರಾತ್ರಿ 7ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, 7.30ಕ್ಕೆ ನಡೇಯುವ ಮಾತೃಸಂಗಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಹೊಸಂಗಡಿ ಶ್ರೀ ಅಯ್ಯಪ್ಪ ಸೇವಾ ಮಾತೃ ಸಮಿತಿ ಅಧ್ಯಕ್ಷೆ ರಜನಿ ಶ್ರೀಧರ್ ಮಜಾಲ್ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಸಹನಾ ಕುಂದರ್ ಸೂಡಾ ಉಡುಪಿ ಧಾರ್ಮಿಕ ಉಪನ್ಯಾಸ ನೀಡುವರು. ವಿವಿಧ ಗಣ್ಯರು ಉಪಸ್ಥಿತರಿರುವರು. ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 8ರಂದು ಬೆಳಿಗ್ಗೆ7.30ಕ್ಕೆ ಪೂಜೆ, 8ಕ್ಕೆ ಗಣಹೋಮ, ಭಜನೆ, 11.30ಕ್ಕೆ ಶಾಸ್ತಿçÃಯ ಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1.30ಕ್ಕೆ ಚಿಂತನ ಮಂಥನ, ಸಂಜೆ 4ಕ್ಕೆ ಭಜನೆ, 5ಕ್ಕೆ ಕುಣಿತ ಭಜನೆ, 7ರಿಂದ ನಾಟ್ಯವೈಭವ, ರಾತ್ರಿ 8ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, 9ರಂದು ಬೆಳಿಗ್ಗೆ 7ಕ್ಕೆ ಪೂಜೆ, 9ಕ್ಕೆ 108 ಕಾಯಿಗಳ ಮಹಾಗಣಯಾಗ, 10.30ಕ್ಕೆ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12ಕ್ಕೆ ಯಾಗ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 3ರಿಂದ 6ರ ತನಕ ಭಜನೆ, 7ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್‌ರಾಜ್ ಕೆ.ಜೆ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಪ್ರವಚನಕಾರರಾದ ವೇದಮೂರ್ತಿ ಶ್ರೀ ಕೇಶವ ಭಟ್ ಕೇಕಣಾಜೆ ಧಾರ್ಮಿಕ ಭಾಷಣ ಮಾಡುವರು. ವೇದಿಕೆಯಲ್ಲಿ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಹಿರಿಯ ಕಾರ್ಯಕರ್ತರಾದ ಶೇಷಪ್ಪ ಸಾಲಿಯಾನ್ ಮತ್ತು ಬಾಲಕೃಷ್ಣ.ಕೆ ಕಣ್ವತೀರ್ಥ ಬೆಂಗ್ರೆ ಇವರನ್ನು ಗೌರವಿಸಲಾಗುವುದು. ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 9.30ರಿಂದ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ ಒರಿಯಾಂಡಲಾ ಸರಿಬೋಡು ನಾಟಕ ಪ್ರದರ್ಶನಗೊಳ್ಳಲಿದೆ. 10ರಂದು 7ಕ್ಕೆ ಪೂಜೆ, 8ಕ್ಕೆ ಗಣಹೋಮ, 9ಕ್ಕೆ ಭಜನೆ, 11ಕ್ಕೆ ಭಕ್ತಿಗಾನ ಚಿಂಚನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2.30ಕ್ಕೆ ದ್ವಜಾವತರಣ, ಶ್ರೀ ಗಣಪತಿ ದೇವರ ಶೋಭಾಯಾತ್ರೆ ಹೊರಡುವುದು, 3ಕ್ಕೆ ಹೊಸಂಗಡಿ ಜಂಕ್ಷನ್‌ನಲ್ಲಿ ಸುಡುಮದ್ದು ಪ್ರದರ್ಶನ, ರಾತ್ರಿ 8ಕ್ಕೆ ಕಣ್ವತೀರ್ಥ ಶ್ರೀರಾಮ ಸಮುದ್ರದಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ.