ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಸಂಘದ 45ನೇ ಭಜನೋತ್ಸವ ಮಾ.29ರಂದು ಮುಂಜಾನೆ ಆರಂಭಗೊಂಡಿದ್ದು, ಸಂಜೆ ತನಕ ನಡೆಯಲಿದೆ.
ಐಲ ಕ್ಷೇತ್ರದ ಪ್ರದಾನ ಅರ್ಚಕರ ಉಪಸ್ಥಿತಿಯಲ್ಲಿ ಕ್ಷೇತ್ರದ ಮೊಕ್ತೇಶರ ಕೃಷ್ಣ ಕುಮಾರ್.ಆರ್ ಐಲ್ ದೀಪ ಪ್ರಜ್ವಲನೆಗೊಳಿಸುವ ಮೂಲಕ ಭಜನೆಗೆ ಚಾಲನೆ ನೀಡಿದರು. ಈ ವೇಳೆ ಕಲಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಳಿಕ ವಿವಿಧ ತಂಡಗಳಿಂದ ಭಜನೋತ್ಸವ ನಡೆಯಿತು.