ಕಾಸರಗೋಡು: ಹಾಡಹಗಲೇ ವಾಹನದಿಂದ 50 ಲಕ್ಷ ರೂ.ಗಳನ್ನು ಕಳವು ಮಾಡಿರುವ ಆಘಾತಕಾರಿ ಘಟನೆ ಮಾ 27 ರಂದು ನಡೆದಿದೆ. ಕಾಸರಗೋಡಿನ ಉಪ್ಪಳದಲ್ಲಿ ಈ ಘಟನೆ ನಡೆದಿದಿದ್ದು ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನದಿಂದ ಹಣ ಕಳ್ಳತನವಾಗಿದೆ. 50 ಲಕ್ಷ ರೂಪಾಯಿ ನಷ್ಟವಾಗಿದೆ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದಿದ್ದು, ಅಧಿಕಾರಿ ಮತ್ತು ಚಾಲಕ ಎಟಿಎಂಗೆ ಹಣ ತುಂಬುತ್ತಿದ್ದಾಗ ಕಳ್ಳ ವಾಹನದ ಗಾಜು ಒಡೆದು ಹಣವಿದ್ದ ಬಾಕ್ಸ್ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.