ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಖೋಟಾ ನೋಟು ಚಲಾವಣೆಯಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಹಿರೇಹಣಗಿ ಗ್ರಾಮದ ಪೆಟ್ರೋಲ್ ಬಂಕಿನಲ್ಲಿ 500 ಮುಖಬೆಲೆಯ 2 ನೋಟುಗಳು ಹಾಗೂ ಅದೇ ಗ್ರಾಮದ ಪಾನ್ ಶಾಪ್ ಅಂಗಡಿಯಲ್ಲೂ ಒಂದು ನೋಟು ಕಂಡುಬಂದಿದೆ.
ಈ ಬಗ್ಗೆ ಅನೇಕರು ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಜಿಲ್ಲಾ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.