ನಯಬಜಾರ್‌ನ ಲಯನ್ಸ್ ಸೇವಾ ಮಂದಿರದಲ್ಲಿ ೬೦೦ನೇ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಜೂ.೨೩ರಂದು

Share with

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ, ಉಪ್ಪಳ, ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ೬೦೦ನೇ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಹಾಗೂ ರಿಯಲ್ ಲ್ಯಾಬ್ ಹೊಸಂಗಡಿ ಇವರಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ ೨೩-೬-೨೦೨೪ ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರ ತನಕ ನಯಬಜಾರ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್  ಲಕ್ಷ್ಮಣ್ ಕುಂಬಳೆ ಅಧ್ಯಕ್ಷತೆ ವಹಿಸುವರು. ಡಿಸ್ಟಿಕ್ ಗವರ್ನರ್ ಲಯನ್ ಸಿಎ ಟಿ.ಕೆ ರಜೀಸ್ ಉದ್ಘಾಟಿಸುವರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು ಆಡಳಿತಾಧಿಕಾರಿ ಲಯನ್ ಡಾ.ಯಂ. ಶ್ರೀಧರ ಭಟ್ ಪ್ರಸ್ತಾವಿಕ ಭಾಷಣ ಮಾಡುವರು. ಕ್ಲಬ್ ಕಾರ್ಯದರ್ಶಿ ಲಯನ್ ಅಶೋಕ್, ಕೋಶಾಧಿಕಾರಿ ಕಮಲಾಕ್ಷ.ಕೆ ಪಂಜ, ನೇತ್ರ ತಜ್ಞ ಡಾ.ಆನಂದ್ ಎಸ್.ಹಂಡಿ ಉಪಸ್ಥಿತರಿರುವರು. ಸಾರ್ವಜನಿಕರು ಈ ಶಿಬಿರದ ಪ್ರಯೋಜನೆಯನ್ನು ಪಡೇದುಕೊಳ್ಳಬೇಕೆಂದು ವಿನಂತಿಸಿದ್ದಾರೆ.


Share with

Leave a Reply

Your email address will not be published. Required fields are marked *