ಭಾರೀ ಪ್ರಮಾಣದಲ್ಲಿ ವಿಮಾನ ಸೇವೆಗಳು ರದ್ದು, ವಿಳಂಬ ಮಾಡಿದ್ದರಿಂದ, IndiGo ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಖಾತೆಗಳಿಗೆ ಹಣ ರೀಫಂಡ್ ಮಾಡುತ್ತಿದೆ. ಈವರೆಗೆ ರೂ.610 ಕೋಟಿ ಮರುಪಾವತಿ ಮಾಡಲಾಗಿದೆ ಎಂದು ವಿಮಾನಯಾನ ಇಲಾಖೆ ತಿಳಿಸಿದೆ.

ಮತ್ತೊಂದೆಡೆ, 95% ಸೇವೆಗಳನ್ನು ರೀಸ್ಟೋರ್ ಮಾಡಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿದೆ. ಡಿಸೆಂಬರ್ 10 ರಿಂದ 15ರ ನಡುವೆ ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಲಿವೆ ಎಂದು ಸಂಸ್ಥೆ ತಿಳಿಸಿದೆ.




