ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಓಜ ಸಾಹಿತ್ಯ ಕೂಟ ಇದರ 64ನೇ ವರ್ಷದ ಏಕಾಹ ಭಜನೋತ್ಸವ ಮಾ.8ರಂದು ಮುಂಜಾನೆ ಕ್ಷೇತ್ರದ ತಂತ್ರಿವರ್ಯರಾದ ಉಮೇಶ ತಂತ್ರಿ ಮಂಗಳೂರು, ಕ್ಷೇತ್ರದ ಪ್ರಧಾನ ಅರ್ಚಕರಾದ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿ ರವರು ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆಯನ್ನು ನೀಡಿದರು.

ಈ ವೇಳೆ ಕ್ಷೇತ್ರದ ಮೊಕ್ತೇಸರುಗಳು, ಓಜ ಸಾಹಿತ್ಯ ಕೂಟದ, ಕ್ಷೇತ್ರದ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಮಾ.9ರಂದು ಸೂರ್ಯೋದಯಕ್ಕೆ ಮಂಗಲಾಚರಣೆ ನಡೆಯಲಿದೆ.