ಬಂಟ್ವಾಳ :ಪಾಣೆಮಂಗಳೂರು ಶ್ರೀ ಶಾರದ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು
ಪಾಣೆಮಂಗಳೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎನ್ ನರೇಂದ್ರನಾಥ ಕುಡ್ವಾ ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿ,
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಕ್ಷಾ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳೇ ರಚಿಸಿದ ಕರ್ನಾಟಕ ಭೂಪಟಕ್ಕೆ ಸಾಂಕೇತಿಕವಾಗಿ 69 ದೀಪಗಳನ್ನು ಹಚ್ಚುವುದರ ಮೂಲಕ ಆಡಳಿತ ಮಂಡಳಿಯ ಅಧ್ಯಕ್ಷರು, ಶಾಲಾ ಸಂಚಾಲಕರು, ಮುಖ್ಯ ಅತಿಥಿಗಳು, ಶಿಕ್ಷಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳೊಡಗೂಡಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.
ಸಾಹಿತಿ ಕವಿ ಜಯಾನಂದ ಪೆರಾಜೆ ಹಾಗೂ ಪಾಣೆಮಂಗಳೂರಿನ ಆಶಾಕಾರ್ಯಕರ್ತೆ ಜ್ಯೋತಿಲಕ್ಷ್ಮಿ ಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಯಾನಂದ ಪೆರಾಜೆ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ಹಿರಿಮೆ ಗರಿಮೆ, ಕನ್ನಡ ಪರಂಪರೆ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಕಾರಣಿಭೂತರಾದ ಕನ್ನಡದ ಮಹಾನ್ ಕವಿಗಳು ಹಾಗೂ ನಮ್ಮ ದಕ್ಷಿಣ ಕನ್ನಡದ ಮತ್ತು ಬಂಟ್ವಾಳ ತಾಲೂಕಿನ ಮೇರು ಸಾಹಿತಿಗಳನ್ನು ಕುರಿತಂತೆ ಅವರೆಲ್ಲರ ಸಾಧನೆಯನ್ನು ಪರಿಚಯಿಸುವುದರ ಮೂಲಕ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ಮನವರಿಕೆ ಮಾಡಿಕೊಟ್ಟರು.
ನವ್ಯ ಮತ್ತು ಒಳಗದವರು ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಡಾ. ಪಿ ವಿಶ್ವನಾಥ ನಾಯಕ್, ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ, , ಶಾಲೆಯ ಹಿರಿಯ ಶಿಕ್ಷಕಿ ಸುಧಾ, ಶಾಲಾ ನಾಯಕ ಮನ್ವಿತ್ ಸಿ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶಿವಪ್ಪ ನಾಯಕ್ ಸ್ವಾಗತಿಸಿ,ಕನ್ನಡ ಭಾಷಾ ಆಧ್ಯಾಪಕರಾದ ಧನರಾಜ್ ದೊಡ್ಡನೇರಳೆ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿನಿ ಶೈಮಾ ಅತಿಥಿಗಳ ಪ್ರಶಸ್ತಿ ಪತ್ರ ವಾಚಿಸಿ, ಖತೀಜತುಲ್ ಸಹಬೀರ ವಂದಿಸಿ,ಅಬ್ದುಲ್ ರಾಝಿಕ್ ಕಾರ್ಯಕ್ರಮ ನಿರೂಪಿಸಿದರು.