ಉಪ್ಪಳ: ಮೊಗವೀರ ಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ 56ನೇ ವಾರ್ಷಿಕ ಏಕಾಹ ಭಜನೆ ಆರಂಭ

Share with

ಉಪ್ಪಳ: ಉಪ್ಪಳ ಸಮೀಪದ ಮೊಗವೀರ ಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ 56ನೇ ವಾರ್ಷಿಕ ಏಕಾಹ ಭಜನೆ ಮತ್ತು ಪುನರ್ ಪ್ರತಿಷ್ಟಾಪನಾ ದಿನಾಚರಣೆ ಹಾಗೂ ಶ್ರೀ ನಾಗದೇವರ ಪ್ರತಿಷ್ಟಾ ವರ್ಧಂತಿ ಕಾರ್ಯಕ್ರಮ ಜ.25ರಿಂದ ಆರಂಭಗೊಂಡಿದ್ದು ಜ.26ರಂದು ಸಮಾಪ್ತಿಗೊಳ್ಳಲಿದೆ.

ಎಂ.ಕುಟ್ಟಿಕೃಷ್ಣನ್ ಗುರುಸ್ವಾಮಿರವರು ದೀಪ ಪ್ರಜ್ವಲನೆಗೊಳಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು.

ಜ.25ರಂದು ಸೂರ್ಯೋದಯಕ್ಕೆ ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಎಂ.ಕುಟ್ಟಿಕೃಷ್ಣನ್ ಗುರುಸ್ವಾಮಿರವರು ದೀಪ ಪ್ರಜ್ವಲನೆಗೊಳಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು. ಬಳಿಕ ಆಶ್ಲೇಷ ಬಲಿ, ಶುದ್ದಿ ಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ರಾತ್ರಿ 7ಕ್ಕೆ ದುರ್ಗಾನಮಸ್ಕಾರ ಪೂಜೆ, ಅನ್ನಸಂತರ್ಪಣೆ, ರಾತ್ರಿ 12ಕ್ಕೆ ಮಹಾಪೂಜೆ, 26ರಂದು ಸೂರ್ಯೋದಯ 6.59ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ದೀಪ ವಿಸರ್ಜನೆ, ರಾತ್ರಿ 7ಕ್ಕೆ ಆನಂದ ಭಜನೆ ನಡೆಯಲಿದೆ.


Share with

Leave a Reply

Your email address will not be published. Required fields are marked *