
ಮಂಜೇಶ್ವರ: ತೂಮಿನಾಡು ಬ್ರಹ್ಮ ಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ಪರಿಸರದಿಂದ ಭಕ್ತವೃಂದದಿಂದ ೮ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಪಾದಯಾತ್ರೆಗೈದರು. ಮಾತೆಯರ ಸಹಿತ ೩೬ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ದೇವದಾಸ ತೂಮಿನಾಡು ಹಾಗೂ ಆಶಾ ಕಣ್ವತೀರ್ಥರವರು ನೇತೄತ್ವ ವಹಿಸಿದರು. ಗುರುವಾರ ಸಂಜೆ ಹೊರಟು ಶುಕ್ರವಾರ ಮುಂಜಾನೆ ಕಟೀಲು ಕ್ಷೇತ್ರ ತಲುಪಿದ್ದಾರೆ.