ಪೈವಳಿಕೆ: ಚಿಪ್ಪಾರು ಹಿಂದೂ ಎ.ಯು.ಪಿ ಶಾಲೆಯಲ್ಲಿ ಸಂಗೀತ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಧ್ಯಾಯಿನಿ ವಿಧ್ಯಾಲಕ್ಷ್ಮಿ ಟೀಚರ್ ವಹಿಸಿದರು.
ಶಾಲಾ ನಿರ್ವಾಹಕರಾದ ಗಂಗಾಧರ ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಗೀತ ತರಬೇತಿ ಶಿಕ್ಷಕಿ ವಿದ್ಯಾ ಜಯರಾಮ ಭಟ್ ಕಜೆ, ಜಯರಾಮ್ ಭಟ್ ಕಜೆ ಉಪಸ್ಥಿತರಿದ್ದರು. ಕು.ಜೀವಿಕಾ, ಸಮೀಕ್ಷ, ಗಾನವಿ ಪ್ರಾರ್ಥನೆ ಹಾಡಿದರು. ಕವಿತಾ ಕೃಷ್ಣ ನಿರೂಪಿಸಿದರು. ಸುಜಾತ ನಾಗೇಂದ್ರ ಚಿಪ್ಪಾರು ಸ್ವಾಗತಿಸಿ, ಜಯಶ್ರೀ ಜಗದೀಶ ವಂದಿಸಿದರು.