ಉಪ್ಪಳ: ಉಪ್ಪಳ ಸಮೀಪದ ಮೊಗವೀರ ಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ 56ನೇ ವಾರ್ಷಿಕ ಏಕಾಹ ಭಜನೆ ಮತ್ತು ಪುನರ್ ಪ್ರತಿಷ್ಟಾಪನಾ ದಿನಾಚರಣೆ ಹಾಗೂ ಶ್ರೀ ನಾಗದೇವರ ಪ್ರತಿಷ್ಟಾ ವರ್ಧಂತಿ ಕಾರ್ಯಕ್ರಮ ಜ.25ಮತ್ತು 26ರಂದು ನಡೆಯಲಿದೆ.
25ರಂದು ಬೆಳಿಗ್ಗೆ ಗಣಹೋಮ, ಸೂರ್ಯೋದಯ 6.59ಕ್ಕೆ ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಎಂ.ಕುಟ್ಟಿಕೃಷ್ಣನ್ ಗುರುಸ್ವಾಮಿ ಇವರಿಂದ ದೀಪ ಪ್ರತಿಷ್ಟೆ, ಭಜನೆ ಪ್ರಾರಂಭ, 9ರಿಂದ 10.30ರ ತನಕ ಆಶ್ಲೇಷ ಬಲಿ, ಶುದ್ದಿ ಕಲಶ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ಕ್ಕೆ ದುರ್ಗಾ ನಮಸ್ಕಾರ ಪೂಜೆ, ಅನ್ನಸಂತರ್ಪಣೆ, ರಾತ್ರಿ 12ಕ್ಕೆ ಮಹಾಪೂಜೆ, 26ರಂದು ಸೂರ್ಯೋದಯ 6.59ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ದೀಪ ವಿಸರ್ಜನೆ, ರಾತ್ರಿ 7ಕ್ಕೆ ಆನಂದ ಭಜನೆ ನಡೆಯಲಿದೆ.