ಉಡುಪಿ: ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಅಪರಿಚಿತ ಮೃತದೇಹದ ಅಂತ್ಯಸಂಸ್ಕಾರವನ್ನು ಮಲ್ಪೆ ಠಾಣಾಧಿಕಾರಿ ಮತ್ತು ಒಳಕಾಡು ಅವರ ನೇತೃತ್ವದಲ್ಲಿ ಉಡುಪಿ ಬೀಡಿನ ಗುಡ್ಡೆಯ ಹಿಂದೂ ರುದ್ರ ಭೂಮಿಯಲ್ಲಿ ಗೌರವಯುತವಾಗಿ ನೆರವೇರಿಸಲಾಯಿತು.
ಜ.7ರಂದು ಮಲ್ಪೆ ಪಾಪನಾಸಿನಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ಮು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರಲ್ಲಿ ರಕ್ಷಿಸಿ ಇಡಲಾಗಿತ್ತು. ವಾರಸುದಾರರು ಬರದ ಕಾರಣ ಅಂತ್ಯಸಂಸ್ಕಾರ ನಡೆಸಲಾಯಿತು.
ತನಿಖಾ ಸಹಾಯಕರಾಗಿ ಮಲ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಶಿಧರ್ ಕೆ, ನಾಗರಾಜ್ ಎಲ್.ಕೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಪ್ರದೀಪ್ ಅಜ್ಜರಕಾಡು, ಸೋನಿ, ಸಾಜಿ ಕುಮಾರ್, ವಿಕಾಸ್ ಶೆಟ್ಟಿ ಒಳಕಾಡು, ಫ್ಲವರ್ ವಿಷ್ಣು ನಗರ ಸಭೆ, ಜಿಲ್ಲಾಸ್ಪತ್ರೆ ಸಹಕರಿಸಿದರು.