ಉಪ್ಪಳ: ಉಪ್ಪಳ ಸಮೀಪದ ಕರಾವಳಿ ಪ್ರದೇಶವಾದ ಶಾರದಾ ನಗರದಲ್ಲಿ ಬಾವಿಯಿಂದ ಮೋಟಾರ್ ಪಂಪ್ ಕಳವು ವ್ಯಾಪಕಗೊಂಡಿದ್ದು, ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಇಲ್ಲಿನ ಶ್ರೀ ಶಾರದಾ ಭಜನಾ ಮಂದಿರದ ಪರಿಸರ ನಿವಾಸಿಗಳಾದ [ದಿ] ರೋಹಿಣಿ ಮತ್ತು [ದಿ] ಗೋಪಾಲ ಬೆಳ್ಚಪ್ಪಾಡ ಎಂಬವರ ಮೋಟಾರ್ ಪಂಪ್ ಜ.25ರಂದು ರಾತ್ರಿ ಕಳವು ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಮನೆಗಳಲ್ಲಿ ಯಾರೂ ವಾಸವಾಗಿಲ್ಲ. ಬೀಗ ಹಾಕಲಾಗಿದೆ.
ಬಾವಿಯ ಮೇಲ್ಭಾಗದಲ್ಲಿರಿಸಲಾಗಿದ್ದ ಮೋಟರ್ ಪೈಪ್‌ನ್ನು ಪೈಪ್‌ನಿಂದ ಮುರಿದು ಎರಡು ಮೋಟರ್ ಪಂಪ್‌ನ್ನು ಕಳವವುಗೈಯ್ಯಲಾಗಿದೆ. ಈ ಮನೆ ಪರಿಸರದ ನಿವಾಸಿಗಳು ಜ.25ರಂದು ರಾತ್ರಿ ಪರಿಸರದ ಭಜನಾ ಮಂದಿರದಲ್ಲಿ ನಡೆಯುವ ಏಕಾಹ ಭಜನೆಗೆ ತೆರಳಿದ್ದರು ಈ ಮಧ್ಯೆ ಕಳ್ಳರು ಕೃತ್ಯ ನಡೆಸಿದ್ದಾರೆ.
ಜ.26ರಂದು ಬೆಳಿಗ್ಗೆ ಗಮನಕ್ಕೆ ಬಂದಿದೆ. ಇದಲ್ಲದೆ ಒಂದೂವರೆ ತಿಂಗಳ ಹಿಂದೆ ಇದೇ ಪರಿಸರದ ಗೋಪಾಲ ಬಂಗೇರ ಎಂಬವರ ತೋಟದ ಬಾವಿಯಿಂದಲೂ ಮೋಟರ್ ಪಂಪ್ ಕಳವುಗೈಯ್ಯಲಾಗಿರುವುದಾಗಿ ತಿಳಿದು ಬಂದಿದೆ. ಮೋಟರ್‌ವೊಂದಕ್ಕೆ ಸುಮಾರು ತಲಾ 12 ಸಾವಿರ ರೂ. ಬೆಲೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದೀಗ ಸ್ಥಳೀಯರಲ್ಲಿ ಆತಂಕಿತರಾಗಿದೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.