ಉಡುಪಿ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಲಕ್ಷ್ಮಣ್ ಅಂಬಾಜಿ(26) ಬಂಧಿತ ಆರೋಪಿ. ಯಡ್ತರೆ ಗ್ರಾಮದ ಶಿವಸಾಗರ ಹೋಟೆಲ್ ಎದುರು ಜ.2ರಂದು ನಿಲ್ಲಿಸಿದ ಆನಂದ ಎಂಬವರ ಸ್ಕೂಟರ್ ಕಳವಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬೈಂದೂರು ಎಸ್ಸೈ ತಿಮ್ಮೇಶ್ ಬಿ.ಎನ್. ನೇತೃತ್ವದ ತಂಡ ಆರೋಪಿಯನ್ನು ಹಾವೇರಿ ಜಿಲ್ಲೆಯ ಬಂಕಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಜ.25ರಂದು ಆರೋಪಿಯನ್ನು ಬಂಧಿಸಿ, ಕಳವು ಮಾಡಿಕೊಂಡು ಹೋಗಿದ್ದ ಸ್ಕೂಟರ್ನ್ನು ವಶಪಡಿಸಲಾಗಿದೆ.