ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಬೇಟಿ ಪಡಾವೋ- ಬೇಟಿ ಬಚಾವೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

Share with

“ಹೆಣ್ಣು ಸಂಸಾರದ ಕಣ್ಣು. ಹೆಣ್ಣು ಮಕ್ಕಳಿಗೆ ಅನುಕಂಪ ಬೇಡ ಪ್ರೋತ್ಸಾಹ ಬೇಕು. ಅವರ ಸಾಧನೆಗಳಿಗೆ ಸ್ಫೂರ್ತಿದಾಯಕ ಪರಿಸರ ನಿರ್ಮಿಸಬೇಕು ಆಗ ಹೆಣ್ಣು ಮಕ್ಕಳ ಬದುಕು ಸುಖಮಯವಾಗುತ್ತದೆ.” ಎಂದು ಕೊಳ್ನಾಡು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಅಸ್ಮಾ ಹಸೈನಾರ್ ಅಭಿಪ್ರಾಯಪಟ್ಟರು.

ಬೇಟಿ ಪಡಾವೋ- ಬೇಟಿ ಬಚಾವೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

ಅವರು ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಗ್ರಾಮಪಂಚಾಯತ್ ಕೊಳ್ನಾಡು, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ಹಾಗೂ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಬೇಟಿ ಪಡಾವೋ-ಬೇಟಿ ಬಚಾವೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಬೇಟಿ ಪಡಾವೋ-ಬೇಟಿ ಬಚಾವೋ ಹಾಗೂ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಕ್ಷಣ್ ರವರು ಹೆಣ್ಣುಮಕ್ಕಳ ಬಾಲ್ಯ ವಿವಾಹದಿಂದಾಗುವ ಆಗುವ ತೊಂದರೆಗಳು, ಬಾಲ್ಯ ವಿವಾಹ ನಿಷೇಧ ಜಾಗೃತಿಯ ಅಂಶಗಳು, ಹೆಣ್ಣು ಮಕ್ಕಳ ಮುಟ್ಟು ಗುಟ್ಟಲ್ಲ- ಋತುಸ್ರಾವ ಸಹಜ ಪ್ರಕ್ರಿಯೆಯ ಅರಿವು ಹಾಗೂ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.

ಸಖಿ ಕೇಂದ್ರ ಮಂಗಳೂರು ಇದರ ಆಡಳಿತಾಧಿಕಾರಿಗಳಾದ ಪ್ರಿಯಾ ಕೆ.ಸಿ.ರವರು “ನೊಂದ ಮಹಿಳೆ- ಹಲವು ಸಮಸ್ಯೆ ಹಾಗೂ ಒಂದು ಸೂರು-ಹಲವು ಸೇವೆ ” ಎಂಬ ಕಲ್ಪನೆಯ ಸಖಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಹೆಣ್ಣು ಮಕ್ಕಳಿಗೆ ಇರುವ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ , ಪೋಲೀಸ್ ನೆರವು , ಕಾನೂನು ನೆರವು, ತಾತ್ಕಾಲಿಕ ವಸತಿ ಸೌಲಭ್ಯ ಹಾಗೂ ಹೆಣ್ಣುಮಕ್ಕಳ ದೌರ್ಜನ್ಯದ ವಿರುದ್ಧ ಹೋರಾಟದ ಬಗ್ಗೆ ವಿವರಿಸಿ ಮಾನಸಿಕ ಸ್ಥೆರ್ಯ ನೀಡಿದರು.

ಶಿಶು ಅಭಿವೃದ್ಧಿ ಯೋಜನೆ ವಿಟ್ಲದ ಅಭಿವೃದ್ಧಿ ಯೋಜನಾಧಿಕಾರಿಗಳಾದ ಉಷಾರವರು ಹೆಣ್ಣು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನೆಬಿಸಾ ಖಾದರ್ ನಾರ್ಶ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಲೈಮಾನ್ ನಾರ್ಶರವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ನಾರ್ಶ ಮೈದಾನ ಪ್ರೌಢಶಾಲೆಯ ಅಸ್ಮಾ ನಾರ್ಶ, ಸುರಿಬೈಲ್ ಪ್ರೌಢಶಾಲೆಯ ಆಯಿಷಾ ಸಝ್ನ, ಮಂಚಿಕೊಳ್ನಾಡು ಪ್ರೌಢಶಾಲೆಯ ಯಶ್ಮಿತಾ ಇವರನ್ನು ಸನ್ಮಾನಿಸಲಾಯಿತು.

ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಗಣ್ಯರು- ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ಸಹಯೋಗದಲ್ಲಿ “ಹೆಣ್ಣುಮಕ್ಕಳ ಜಾಗೃತಿ- ಬೇಟಿ ಪಡಾವೋ ಬೇಟಿ ಬಚಾವೋ ” ಜಾಥಾವನ್ನು ಶಾಲಾ ಸುತ್ತಲ ಪರಿಸರದದಲ್ಲಿ ನಡೆಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದ ವಿವಿಧ ಚಟುವಟಿಕೆಗಳ ಸಂಯೋಜನೆಯಲ್ಲಿ ಕೊಳ್ನಾಡು ಪಂಚಾಯತ್ ವಲಯ ಮೇಲ್ವಿಚಾರಕರಾದ ಲೋಲಾಕ್ಷಿ, ವಿಟ್ಲ ವಲಯ ಪೋಷಣ್ ಅಭಿಯಾನ ಸಂಯೋಜಕರಾದ ವಿನುತಾ ಹಾಗೂ ಅಂಗನವಾಡಿ ಶಿಕ್ಷಕಿಯರಾದ ಸುಮನಾ, ಜಯಂತಿ ಮತ್ತು ಶಶಿಕಲಾರವರು ಸಹಕರಿಸಿದರು.

ಶಿಕ್ಷಕರಾದ ತಾರಾನಾಥ ಕೈರಂಗಳ್, ಅಬ್ದುಲ್ ರಫೀಕ್, ಶರತ್ ಕುಮಾರ್ ಚೌಟ, ಸರೋಜಮ್ಮ, ಭಾರತಿ, ಶಿವರಾಜ್, ಸುದರ್ಶನ, ಗಿರೀಶ್ ಟೇರಿ ರೋಸಲಿನ್, ಜಯಶ್ರೀ, ಮಾಲತಿ, ವೇದಾವತಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಸ್ವಾಗತಿಸಿ, ಮುಖ್ಯ ಶಿಕ್ಷಕಿಯಾದ ಲತಾ ಕಾವೂರು ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *