ಉಡುಪಿ: ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 13 ಮಂದಿ ಹಾಗೂ 21 ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ಕರಂಬಳ್ಳಿ ದೇವಸ್ಥಾನ ಬಳಿ ನಡೆದಿದೆ.
ಕೋಳಿ ಅಂಕದಲ್ಲಿ ನಿರತರಾಗಿದ್ದ ಚಂದ್ರಶೇಖರ, ಹರೀಶ್, ಸಚಿನ್, ಯೋಗೀಶ್, ನಾಗೇಶ್, ಪ್ರಕಾಶ, ಜಯ, ಸುರೇಶ್, ಅನಿಲ್ ನವೀನ್, ಶಾಹಿನ್, ಶಂಕರ ಹಾಗೂ ಈಶ್ವರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಲವು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿಬಾಳು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. 21 ಕೋಳಿ, 2600ರೂ. ನಗದು ಮತ್ತು 2 ಕೋಳಿ ಬಾಳ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.