ಉಪ್ಪಳ: ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಿ.ಎಂ.ಎಸ್ ನೇತಾರ ಆಟೋರಿಕ್ಷಾ ಚಾಲಕ ಮೃತ್ಯು

Share with

ಉಪ್ಪಳ: ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಬಿ.ಎಂ.ಎಸ್ ನೇತಾರ ಆಟೋ ರಿಕ್ಷಾ ಚಾಲಕ ಮೃತಪಟ್ಟ ಘಟನೆ ನಡೆದಿದೆ.

ಕುಬಣೂರು ನಿವಾಸಿ ಬಂದ್ಯೋಡಿನಲ್ಲಿ ಕಳೆದ 30 ವರ್ಷಗಳಿಂದ ಅಟೋರಿಕ್ಷಾ ಚಾಲಕರಾದ ಪದ್ಮನಾಭ

ಕುಬಣೂರು ನಿವಾಸಿ ಬಂದ್ಯೋಡಿನಲ್ಲಿ ಕಳೆದ 30 ವರ್ಷಗಳಿಂದ ಅಟೋರಿಕ್ಷಾ ಚಾಲಕರಾದ ಪದ್ಮನಾಭ [50] ಚಿಕಿತ್ಸೆ ಫಲಕಾರಿಯಾಗದೆ ಫೆ.2ರಂದು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಫೆ.1ರಂದು ಸಂಜೆ ಕುಬಣೂರು ಪರಿಸರದ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಿಲ್ಸ್ ನಿರ್ಮಾಣಕ್ಕೆ ಕಾರ್ಮಿಕರನ್ನು ಕೊಂಡುಹೋಗಿದ್ದರು.

ಅಲ್ಲಿ ಮೇಲಂತಸ್ತಿನಲ್ಲಿ ಕಾರ್ಮಿಕರ ಜೊತೆ ಅಳತೆ ತೆಗೆಯಲು ಸಹಕರಿಸುತ್ತಿದ್ದರು. ಈ ವೇಳೆ ಆಯತಪ್ಪಿ ಮೆಟ್ಟಿಲುನಿಂದ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟರು.

ಇವರು ಬಿ.ಎಂ.ಎಸ್ ಮಂಗಲ್ಪಾಡಿ ಪಂಚಾಯತ್ ಸಮಿತಿಯ ಜತೆ ಕಾರ್ಯದರ್ಶಿ, ಬಿ.ಎಂ.ಎಸ್ ಬಂದ್ಯೋಡು ಅಟೋರಿಕ್ಷಾ ಸ್ಟಾಂಡ್ ಯೂನಿಟ್‌ನ್ ಅಧ್ಯಕ್ಷ ಹಾಗೂ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದರು. ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಾಕ್ಷರು ಆಗಿದ್ದರು. ಉತ್ತಮ ಸಮಾಜ ಸೇವಾಕರಗಿದ್ದು ಇವರ ನಿಧನದಿಂದ ಬಂದ್ಯೋಡು ಸಹಿತ ಪರಿಸರ ಪ್ರದೇಶ ಶೋಕಸಾಗರದಲ್ಲಿ ಮುಳುಗಿಸಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಫೆ.2ರಂದು ರಾತ್ರಿ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಮೃತರು ತಂದೆ ರಾಮ ಬೆಳ್ಚಪ್ಪಾಡ, ಪತ್ನಿ ಸುಜಾತ, ಮಕ್ಕಳಾದ ಅಮೃತ, ಆದರ್ಶ್, ಸಹೋದರರಾದ ನಾಗೇಶ, ಸಹೋದರಿಯರಾದ ಪವಿತ್ರ, ಮಲ್ಲಿಕ, ಸುಗಂಧಿ, ಸುಜಾತ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿ.ಎಂ.ಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್, ಉಪಾಧ್ಯಾಕ್ಷ ಅಡ್ವ, ಮುರಳೀಧರನ್, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಕುಂಬಳೆ ವಲಯಧ್ಯಕ್ಷ ವೇಣುಗೋಪಾಲ ಶೆಟ್ಟಿ, ಪುಷ್ಪರಾಜ್ ನಾಯ್ಕಾಪು, ಜೆರಿ ಡಿ ಸೋಜಾ ಕಯ್ಯಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ, ರಾಮಚಂದ್ರ ಬಲ್ಲಾಳ್, ವೀರಪ್ಪ ಅಂಬಾರು, ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲಾ ಆಡಳಿತ ಮಂಡಳಿ ಅಧ್ಯಾಪಕ ವೃಂದದವರು, ಕೆ.ಪಿ ವಲ್ಸರಾಜ್ ಹಾಗೂ ಸಂಘ ಪರಿವಾರದ ನೇತಾರರು, ಕಾರ್ಯಕರ್ತರು, ಅಟೋರಿಕ್ಷಾ ಚಾಲಕರ ಸಹಿತ ನೂರಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *