ಮಂಜೇಶ್ವರ ರೈಲ್ವೆ ನಿಲ್ದಾಣ ಹಲವಾರು ವರ್ಷಗಳ ಬಳಿಕ ಅಭಿವೃದ್ದಿಗೆ ಚಾಲನೆ; ಅತ್ಯಗತ್ಯದ ರೈಲು ಗಾಡಿ ನಿಲುಗಡೆಗೆ ಸಾರ್ವಜನಿಕರ ಒತ್ತಾಯ

Share with

ಮಂಜೇಶ್ವರ: ಅವ್ಯವಸ್ಥೆಯಿಂದ ಕಾರ್ಯಾಚರಿಸುತ್ತಿರುವ ಮಂಜೇಶ್ವರ ರೈಲ್ವೆ ನಿಲ್ದಾಣ ಹಲವಾರು ವರ್ಷಗಳ ಬಳಿಕ ಅಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಆದರೆ ಅತ್ಯಗತ್ಯದ ರೈಲು ನಿಲುಗಡೆಯಿಲ್ಲದಿರುವುದರಿಂದ ಜನರು ತೀರಾ ಸಮಸ್ಯೆಗೆ ಕಾರಣವಾಗಿದೆ.

ಮಂಜೇಶ್ವರ ರೈಲ್ವೆ ನಿಲ್ದಾಣ ಹಲವಾರು ವರ್ಷಗಳ ಬಳಿಕ ಅಭಿವೃದ್ದಿಗೆ ಚಾಲನೆ

ಈಗಾಗಲೇ ರೈಲ್ವೆ ನಿಲ್ದಾಣದಲ್ಲಿ ಹೊಸತಾಗಿ ಟಿಕೇಟ್ ಕೌಂಟರ್ ಕಟ್ಟಡ, ಮೇಲ್ಸೇತುವೆ ನಿರ್ಮಾಣಗೊಂಡಿದೆ. ಫ್ಲಾಟ್ ಫಾರ್ಮ್ ನೆಲಕ್ಕೆ ಕಾಂಕ್ರೀಟ್ ಹಾಗೂ ಕಲ್ಲುಗಳನ್ನು ಹಾಸುವ ಕೆಲಸ ನಡೆಯುತ್ತಿದೆ. ಅಲ್ಲದೆ ನೂತನ ಸ್ಟೇಷನ್ ಕಟ್ಟಡ ನಿರ್ಮಾಣಕ್ಕೆ ಸ್ಥಳ ಸಮತಟ್ಟು ಮಾಡುವ ಕೆಲಸಗಳು ನಡೆಯುತ್ತಿದೆ. ಸಂಪೂರ್ಣ ಕೆಲಸಗಳು ಕೇಂದ್ರ ಸರಕಾರದಿಂದಲೇ ನಡೆಯುತ್ತಿದೆ.

ನೂತನ ಸ್ಟೇಷನ್ ಕಟ್ಟಡ ನಿರ್ಮಾಣಕ್ಕೆ ಸ್ಥಳ ಸಮತಟ್ಟು ಮಾಡುವ ಕೆಲಸಗಳು ನಡೆಯುತ್ತಿದೆ.

ಅಭಿವೃದ್ದಿಗೊಳ್ಳುತ್ತಿದ್ದರುವುದು ನಾಗರಕರಲ್ಲಿ ಖುಷಿ ನೀಡುತ್ತಿದ್ದರೂ ಅತ್ಯಗತ್ಯದ ರೈಲು ಗಾಡಿ ನಿಲುಗಡೆಗೆ ಆಗ್ರಹಿಸಿದ್ದಾರೆ. ಇದೀಗ ಕೆಲವೇ ರೈಲುಗಾಡಿಗಳು ಮಾತ್ರವೇ ನಿಲುಗಡೆಗೊಳುತ್ತಿದೆ. ಮಾವೇಲಿ, ಪರಶುರಾಮ, ಬೆಂಗಳೂರು, ಎಕ್ಸ್ ಪ್ರೆಸ್, ಮುಂಬಯಿಗೆ ತೆರಳಲು ನೇತ್ರಾವತಿ, ಡೆಲ್ಲಿ ಯಾತ್ರೆಗೆ ಮಂಗಳ ಎಕ್ಸ್ ಪ್ರೆಸ್ ಈ ಎಲ್ಲಾ ರೈಲು ಗಾಡಿಗಳು ನಿಲುಗಡೆಗೊಳಿಸಲು ಸಾರ್ವಜನಿಕರ ಪ್ರಧಾನ ಬೇಡಿಕೆಯಾಗಿದೆ.

ಮುಂಬಯಿ, ಡೆಲ್ಲಿ ಸಹಿತ ದೂರದ ಪ್ರಯಾಣಕ್ಕೆ ಕಾಸರಗೋಡು ಅಥವಾ ಕಂಕನಾಡಿಗೆ ತೆರಳಬೇಕಾದ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಮಂಜೇಶ್ವರದಲ್ಲಿ ನಿಲುಗಡೆಗೊಂಡಲ್ಲಿ ಕುಂಬಳೆ, ಬಂದ್ಯೋಡು, ಉಪ್ಪಳ, ತಲಪಾಡಿ ಸಹಿತ ಪರಿಸರದ ಪ್ರದೇಶಗಳ ಜನರಿಗೆ ಮಂಜೇಶ್ವರ ರೈಲ್ವೆ ನಿಲ್ದಾಣ ಪ್ರಯೋಜನವಾಗಲಿದೆ ಹಾಗೂ ಹೆಚ್ಚು ಕಲೆಕ್ಷನ್ ಉಂಟಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಅಭಿವೃದ್ದಿ ಜೊತೆಯಲ್ಲಿ ಎಲ್ಲಾ ರೈಲುಗಾಡಿ ನಿಲುಗಡೆಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *