ಮಂಜೇಶ್ವರ: ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಕೋಟೇಶ್ವರ, ಶ್ರೀಮತ್ ಅನಂತೇಶ್ವರ ದೇವಸ್ಥಾನ ಹಾಗೂ ಜಿ.ಎಸ್.ಬಿ ಸಂಘ ಮಂಜೇಶ್ವರ ಇವರ ಸಹಕಾರದೊಂದಿಗೆ 53ನೇ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಫಿಜಿಯೋಥೆರಪಿ ಶಿಬಿರ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಮಂಜೇಶ್ವರ ಶ್ರೀ ವಿಭುದೇಂದ್ರ ಕಲಾ ಮಂಟಪದಲ್ಲಿ ನಡೆಯಿತು. ಕ್ಷೇತ್ರದ ಮಾಜಿ ಅದ್ಯಕ್ಷ ಕೆ.ದಿನೇಶ್ ಜಿ.ಕಾಮತ್ ಕೋಟೇಶ್ವರ ದೀಪಪ್ರಜ್ವಲನೆಗೊಳಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಅಧ್ಯಕ್ಷ ಟಿ.ಗಣಪತಿ ಪೈ ಅಧ್ಯಕ್ಷತೆ ವಹಿಸಿದರು. ವೈಧ್ಯಾಧಿಕಾರಿಗಳಾದ ಡಾ.ಎಂ.ಎಸ್ ಕಾಮತ್, ಡಾ.ಸದಾನಂದ ಭಟ್, ಡಾ.ಗಾಯತ್ರಿ ಪಡಿಯಾರ್, ಮುಖ್ಯ ಅತಿಥಿಗಳಾಗಿ ಮಂಗಳೂರು ಮೆ. ಪೈ.ಸೇಲ್ಸ್ ಕಾರ್ಪೋರೇಶನ್ ಆಡಳಿತ ನಿರ್ಧೇಶಕ ಟಿ.ರತ್ನಾಕರ ಪೈ, ಗೌರವ ಉಪಸ್ಥಿತಿ ಕ್ಷೇತ್ರದ ಉಪಾಧ್ಯಾಕ್ಷ ಆರ್.ನಿತಿನ್ ಚಂದ್ರ ಪೈ, ಮಂಜೇಶ್ವರ, ಕೋಶಧಿಕಾರಿ ಪ್ರಶಾಂತ್ ಪೈ ಮಂಗಳೂರು, ಮಂಜೇಶ್ವರ ಎಸ್.ಎ.ಟಿ ವಿದ್ಯಾಸಂಸ್ಥೆ ಪ್ರಬಂಧಕ ಎಂ.ಪ್ರಶಾಂತ್ ಹೆಗ್ಡೆ ಮಂಜೇಶ್ವರ, ಕ್ಷೇತ್ರದ ಮುಕ್ತೇಸರರು ರಾಜೇಶ್ ಪೈ ಕಾಸರಗೋಡು ಉಪಸ್ಥಿತರಿದ್ದರು. ಮಂಜೇಶ್ವರ ಗೌಡಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಶ್ಯಾಮ್ ಪ್ರಸಾದ್ ಪ್ರಭು ಸ್ವಾಗತಿ, ಪ್ರಶಾಂತ್ ಪೈ ಮಂಗಳೂರು ದನ್ಯವಾದ ನೀಡಿದರು. ಪಲ್ಲವಿ ಪ್ರಭು ಪ್ರಾರ್ಥನೆ ಹಾಡಿದರು. ಲಕ್ಷ್ಮಿ ದಾಸ್ ಪ್ರಭು ನಿರೂಪಿಸಿದರು.