ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ..!

Share with

ವಿಟ್ಲ: ಬ್ಯಾಂಕ್ ನೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 8ರಂದು ನಡೆದಿದೆ.

ಗ್ಯಾಸ್ ಕಟ್ಟ‌ರ್ ಮೂಲಕ ಬ್ಯಾಂಕ್ ಶಾಖಾ ಕಟ್ಟಡದ ಹಿಂಬದಿಯ ಕಿಟಕಿ ತುಂಡರಿಸಿ ದರೋಡೆಕೋರರು ಒಳನುಗ್ಗಿದ್ದಾರೆನ್ನಲಾಗಿದೆ. ಗ್ಯಾಸ್ ಕಟ್ಟರ್ ಮೂಲಕ ಸೇಫ್ ಲಾಕರ್ ನಲ್ಲಿದ್ದ ಅಪಾರ ಪ್ರಮಾಣದ ಸೊತ್ತು ದರೋಡೆಕೋರರ ಪಾಲಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 20 ವರ್ಷ ಹಳೆಯ ಕಟ್ಟಡದಲ್ಲಿರುವ ಬ್ಯಾಂಕ್ ಸುತ್ತಲೂ ಕಾಡು-ಪೊದೆಗಳೆ ಆವರಿಸಿಕೊಂಡಿದೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ವಿಟ್ಲ ಪೊಲೀಸ್‌ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.


Share with

Leave a Reply

Your email address will not be published. Required fields are marked *