ಮಂಜೇಶ್ವರ: ವಿವಿಧ ಕಡೆಗಳಲ್ಲಿ ಅಗ್ನಿದುರಂತ ಉಂಟಾಗಿದ್ದು, ಅಗ್ನಿಶಾಮಕ ದಳ ನಡೆಸಿದ ಕಾರ್ಯಚರಣೆಯಿಂದ ಅಪಾಯ ತಪ್ಪಿದೆ. ಬುಧವಾರ ಮಧ್ಯಾಹ್ನ ಮಂಜೇಶ್ವರ ಗೋವಿಂದ ಪೈ ಕಾಲೇಜು ಪರಿಸರದಲ್ಲಿ ಜಗನ್ನಾಥ ಶೆಟ್ಟಿ ಎಂಬವರ ಹುಲ್ಲು ತುಂಬಿದ ಹಿತ್ತಿಲಿನಲ್ಲಿ ಬೆಂಕಿ ತಗಲಿ ಉರಿದಿದೆ ಹಾಗೂ ಪಚ್ಚಂಬಳ, ಬಾಳಿಯೂರು ಖಾಸಾಗಿ ವ್ಯಕ್ತಿಯ ಖಾಲಿ ಹಿತ್ತಿಲಿಗೆ ಬೆಂಕಿ ತಗಲಿ ಹುಲ್ಲು, ಕಾಡು ಪೊದೆಗಳು ಉರಿದಿದೆ. ಉಪ್ಪಳದಿಂದ ಅಗ್ನಿಶಾಮಕ ದಳದ ಸೀನಿಯರ್ ಫಯರ್ ಆಫೀಸರ್ ಸುನಿಲ್ ಕುಮಾರ್ ರವರ ನೇತೃತ್ವದಲ್ಲಿ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ. ದಾರಿ ಹೋಕರು ಬೀಡಿ ಸೇದಿ ಎಸೆದಿರಬಹುದೆಂದು ಅಂದಾಜಿಸಲಾಗಿದೆ. ಕಿಡಿ ಬಿಸಿಲಿನ ತಾಪಕ್ಕೆ ಉರಿಯಲು ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.