ಮಂಜೇಶ್ವರ: ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ [ದಿ] ನಾರಾಯಣ ಮೂಲ್ಯ ರವರ ಪುತ್ರ ಎಂ.ಅರವಿಂದನ್ [43] ಹೃದಯಘಾತದಿಂದ ನಿಧನರಾದರು.
ಫೆ.8ರಂದು ಬೆಳಿಗ್ಗೆ ಸುಮಾರು 8ಗಂಟೆಗೆ ತೀರಾ ಅಸ್ಚಸ್ಥಗೊಂಡಿದ್ದರು. ಕೂಡಲೇ ತೊಕ್ಕೋಟು ಖಾಸಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಆದರೆ ಅಷ್ಟರಲ್ಲಿ ನಿಧನರಾಗಿದ್ದರು. ಇವರು ಮಂಗಳೂರಿನ ಕಾಲ್ ಸೆಂಟರ್ನಲ್ಲಿ ಉದ್ಯೋಗಿಯಾಗಿದ್ದು, ಕೋವಿಡ್ ಬಳಿಕ ಮನೆಯಲ್ಲಿಯೇ ಕೆಲಸವನ್ನು ಮಾಡುತ್ತಿದ್ದರು. ಮೃತರು ತಾಯಿ ಪಾರ್ವತಿ, ಪತ್ನಿ ಚಿತ್ರ, ಪುತ್ರ ಸಮರ್ಥ್, ಸಹೋದರರಾದ ನಾಗೇಶ್, ವಿಜಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ನಿನ್ನೆ ಮಧ್ಯಾಹ್ನ ತಲಪಾಡಿ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.