ಬಿಜೆಪಿ ಮಂಜೇಶ್ವರ ಮಂಡಲ ಮಹಿಳಾ ಪ್ರಮುಖರ ಸಭೆ; ಇತಿಹಾಸ ಬದಲಾವಣೆಯಲ್ಲಿ ಸ್ತ್ರೀಯರ ಪಾತ್ರ ಅಪಾರ- ಅಶ್ವಿನಿ ಎಂ ಎಲ್

Share with

ಮಂಜೇಶ್ವರ: ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಬದಲಾವಣೆಯಲ್ಲಿ ಸ್ತ್ರೀ ಯರ ಪಾತ್ರ ಪ್ರಾಮುಖ್ಯತೆ ಪಡೆದದ್ದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ಜರುಗಿದ ಬಿಜೆಪಿ ಮಂಜೇಶ್ವರ ಮಂಡಲ ಮಹಿಳಾ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸಂಗಡಿ ಪ್ರೇರಣಾದಲ್ಲಿ ಜರುಗಿದ ಬಿಜೆಪಿ ಮಂಜೇಶ್ವರ ಮಂಡಲ ಮಹಿಳಾ ಪ್ರಮುಖರ ಸಭೆ

ಮಂಡಲ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಕಮಲಾಕ್ಷ ಮಾಡ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿ ರಾಜಕೀಯದಲ್ಲಿ ಮಹಿಳೆಯರ ಪಾತ್ರ ವಿವರಿಸಿದರು. ಕೇಂದ್ರ ಜಾರಿಗೆ ತರುವ ಮಹಿಳಾ ಬಿಲ್ ದೇಶದ ಮಹಿಳಾ ಸಮಾಜಕ್ಕೆ ಸಿಕ್ಕ ಗೌರವ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಮಾತನಾಡಿ ದೇಶದಲ್ಲಿ ಮೋದಿ ಆಡಳಿತದಲ್ಲಿ ಸ್ತ್ರಿ ಸಮುದಾಯಕ್ಕೆ ಸಿಕ್ಕಿರುವ ಸವಲತ್ತುಗಳ ಬಗ್ಗೆ, ಸ್ವಾವಲಂಬಿ ಮಹಿಳೆ ದೇಶದ ಆಸ್ತಿ ಎಂದು ಹೇಳಿದರು. ಮಂಜೇಶ್ವರದ ಹಿರಿಯ ನೇತಾರೆ ಶ್ರೀಮತಿ ಕುಸುಮ ಟೀಚರ್ ರನ್ನು ಮತ್ತು ಕೃಷಿಕೆ ಶ್ರೀಮತಿ ಮಾಯಶ್ರೀ ಬಾಯರುರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರುಗಳಾದ ಮಣಿಕಂಠ ರೈ, ಜಯಲಕ್ಷ್ಮಿ ಭಟ್, ವಿನಯ ಭಾಸ್ಕರ, ಆಶಾಲತಾ ಪೆಲಪಾಡಿ, ಮಮತಾ ವರ್ಕಾಡಿ, ಗೀತಾ ಭಾಸ್ಕರ್, ಆಶಾ, ಶಶಿಕಲಾ ಮಾಡ ಮಹಿಳಾ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ತುಳಸಿ ವಿ ಸ್ವಾಗತಿಸಿ, ಯತೀರಾಜ್ ವಂದಿಸಿದರು.


Share with

Leave a Reply

Your email address will not be published. Required fields are marked *