ಪೈವಳಿಕೆ: ಕೊಮ್ಮಂಗಳ ಕೊರತಿಪಾರೆ ಶ್ರೀ ಕೊರತಿ-ಗುಳಿಗ, ಕೊರಗತನಿಯ ದೈವಸ್ಥಾನದಲ್ಲಿ ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ ಫೆ.23ರಂದು ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಗಣಪತಿ ಹೋಮ, 11ಕ್ಕೆ ಶ್ರೀ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಶ್ರೀ ಕೊರತಿ, ಗುಳಿಗ ದೈವಗಳ ಭಂಡಾರ ಇಳಿಯುವುದು, 6.30ರಿಂದ ಶ್ರೀ ಕೊರತಿ ದೈವದ ಕೋಲ, ರಾತ್ರಿ 8.30ರಿಂದ ಅನ್ನಸಂತರ್ಪಣೆ, 9.30ರಿಂದ ಶ್ರೀ ಕೊರಗತನಿಯ ದೈವದ ಕೋಲ, ರಾತ್ರಿ 1ರಿಂದ ಕೆಂಡಸೇವೆಯೊಂದಿಗೆ ಗುಳಿಗ ದೈವದ ಕೋಲ ನಡೆಯಲಿದೆ.