ಉಡುಪಿ: ಮಲ್ಪೆ ಕಡಲ ತೀರದಲ್ಲಿ ಬ್ಲಾಗರ್ಸ್ ಮೀಟ್ ಗೆ ಚಾಲನೆ

Share with

ಉಡುಪಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಾಮಾಜಿಕ ಜಾಲತಾಣದ ಪ್ರಭಾವಿಗಳ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿರುವ ಬ್ಲಾಗರ್ ಮೀಟ್ ಗೆ ಮಲ್ಪೆ ಕಡಲತೀರದಲ್ಲಿ ಫೆ.24ರಂದು ಚಾಲನೆ ನೀಡಲಾಯಿತು.

ಬ್ಲಾಗರ್ ಮೀಟ್ ಗೆ ಮಲ್ಪೆ ಕಡಲತೀರದಲ್ಲಿ ಚಾಲನೆ ನೀಡಲಾಯಿತು.

ಉಡುಪಿ ಜಿಲ್ಲಾಡಳಿತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ದೇಶದ ನಾನಾ ಭಾಗಗಳಿಂದ ಬ್ಲಾಗರ್‌ಗಳನ್ನು ಆಹ್ವಾನಿಸಿ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ಹೆಮ್ಮೆ ತಂದಿರುವ ಪ್ರವಾಸಿ ತಾಣಗಳ ಬಗ್ಗೆ ದೇಶಾದ್ಯಂತ ಪ್ರಚಾರಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಮುಂದಾಗಿದೆ. ಸತತ ಎರಡು ವರ್ಷಗಳಿಂದ, ಈ ಪ್ರಯೋಗ ನಡೆಸುತ್ತಿದ್ದು ಪ್ರಸಿದ್ಧ ಬ್ಲಾಗರ್ ಗಳು ಉಡುಪಿ ಜಿಲ್ಲಾ ಪ್ರವಾಸಿ ತಾಣಗಳ ಸಂಚಾರ ಕೈಗೊಳ್ಳಲಿದ್ದಾರೆ.

ಮಲ್ಪೆ ಕಡಲತೀರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಬ್ಲಾಗರ್ ಮೀಟ್

ಮುಂದಿನ ಮೂರು ದಿನಗಳ ಕಾಲ ಮಲ್ಪೆ, ಸೈಂಟ್ ಮೇರಿಸ್ ದ್ವೀಪ, ಮಣಿಪಾಲದ ಹೆರಿಟೇಜ್ ವಿಲೇಜ್, ಕಟಪಾಡಿ ಕಂಬಳ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಹಾಗೂ ಆಚರಣೆಗಳಲ್ಲಿ ಬ್ಲಾಗರ್ಗಳು ಭಾಗವಹಿಸಲಿದ್ದಾರೆ. ಈ ಮೂಲಕ ಕರಾವಳಿಯ ಕಂಪನ್ನು ದೇಶಾದ್ಯಂತ ಪಸರಿಸಲಿದ್ದಾರೆ.


Share with

Leave a Reply

Your email address will not be published. Required fields are marked *