ಮಂಜೇಶ್ವರ: ಪಟ್ಟತ್ತೂರು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಮತ್ತು ಶ್ರೀ ವೀರಪುತ್ರ ದೈವದ ದೈವಸ್ಥಾನದ ಹಾಗೂ ಪರಿವಾರ ದೈವಗಳ ನೂತನ ಗರ್ಭಗುಡಿಯ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸಂಭ್ರಮ ಇಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಿತು. ಶನಿವಾರ ಅಂಗಡಿಪದವು ಕೊರಗಜ್ಜ ಗುಡಿ ಬಳಿಯಿಂದ ಶ್ರೀಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಬಳಿಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಿತು. ಇಂದು ಬೆಳಿಗ್ಗೆ ೧೧.೧೭ರ ಮುಹೂರ್ತದಲ್ಲಿ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಬ್ರಹ್ಮಕಲಶೋತ್ಸವ ಸಂಭ್ರಮ ನಡಯಿತು. ಸಾ೦ಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ ೨ಕ್ಕೆ ಮಜಿಬೈಲು ಶ್ರೀ ವಿಷ್ಣು ಯಕ್ಷ ಬಳಗ ದವರಿಂದ ಸಪ್ತ ದುರ್ಗೆಯರು ಯಕ್ಷಗಾನ ತಾಳಮದ್ದಳೆ, ರಾತ್ರಿ ೮ರಿಂದ ತ್ರಿಶೂಲ್ ಫ್ರೆಂಡ್ಸ್ ಸಂತಡ್ಕ ಅರ್ಪಿಸುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಸಾಯಿಶಕ್ತಿ ಕಲಾ ಬಳಗ ಉರ್ವ ಚಿಲಿಂಬಿ ಇವರಿಂದ ಬೊಳ್ಳಿಮಲೆತ ಶಿವಶಕ್ತಿಲು ನಾಟಕ ಪ್ರದರ್ಶನಗೊಳ್ಳಲಿದೆ.