ಕಲ್ಲಡ್ಕ: ಶಾಲೆಯಲ್ಲಿ ದೊಡ್ಡ ನೀರಿನ ಟ್ಯಾಂಕ್ ಇದ್ದು ಸ್ವಚ್ಚತೆ ಇಲ್ಲದೆ ಪಾಳು ಬಿದ್ದಿದ್ದು ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದು ಶಾಲಾ ಸಮಿತಿಯರು ಹಲವಾರು ಬಾರಿ ಪಂಚಾಯತ್ ದೂರು ನೀಡಿದರೂ ಯಾವುದೇ ರೀತಿ ಸ್ಪಂದಿಸದೆ ಕಡೆಗಣಿಸಿದ್ದು, ಕೊನೆಗೆ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡದವರಿಗೆ ಮನವಿ ಮಾಡಿದ ತಕ್ಷಣವೇ ಸ್ಪಂದಿಸಿ ಕೆಳಗೆ ಬಿದ್ದಿದ್ದ ಭ್ರಹದಾಕಾರದ ಕಬ್ಬಿಣದ ಏಣಿಯನ್ನು ಎತ್ತಿ ನಿಲ್ಲಿಸಿ, 40 ಅಡಿ ಎತ್ತರದ ಟ್ಯಾಂಕ್ ಒಳಗಡೆ ಉಡ, ಇಲಿ ಸತ್ತು ಬಿದ್ದಿದ್ದನ್ನು ತೆಗೆದು, ಟ್ಯಾಂಕ್ ತೊಳೆದು ಸ್ವಚ್ಚ ಮಾಡಿ ಶಾಲಾ ಮಕ್ಕಳು ಸ್ವಚ್ಛ ನೀರು ಕುಡಿಯುವ ಹಾಗೆ ಮಾಡಿದದರು.
ಶಾಲಾ ಜಾಗದಲ್ಲೇ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಬಹುಗ್ರಾಮ ನೀರಿನ ಯೋಜನೆಯ ದೊಡ್ಡ ಟ್ಯಾಂಕ್ ರಚನೆ ಆಗಿದ್ದರೂ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ವಿಪರ್ಯಾಸವಾಗಿದೆ.
ತರಗತಿ ನಡೆಯುವ ಪಕ್ಕದಲ್ಲಿ ಶಿಥಿಲ ಅವಸ್ಥೆಯಲ್ಲಿ ಕಟ್ಟಡ ಒಂದು ಇದ್ದು ಅದನ್ನು ತೆರೆವುಗೊಳಿಸದೆ ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಪ್ರಾಣದ ಜೊತೆ ಯಾಕೆ ಚೆಲ್ಲಾಟ ಆಡುತ್ತೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಸ್ಪಂದಿಸಿ, ಪಾಲುಬಿದ್ದ ಕಟ್ಟಡವನ್ನು ತೆರವುಗೊಳಿಸಿ ಮಕ್ಕಳು ಭಯಬೀತವಿಲ್ಲದೆ ಶಿಕ್ಷಣ ಪಡೆಯುವಂತಾಗಬೇಕೆಂದು ಕಲ್ಲಡ್ಕ ಶೌರ್ಯ ವಿಪತು ತಂಡ ಆಗ್ರಹಿಸಿದೆ.