ಬಂಟ್ವಾಳ: ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ 2023-24ನೇ ಸಾಲಿನ ಕ್ರೈಸ್ತ ಶಿಕ್ಷಣ ದಿನಾಚರಣೆಯನ್ನು ಫೆ.25ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ವಂದನೀಯ ಫೆಲಿಕ್ಸ್ ಪಿಂಟೊ ಪ್ರಧಾನ ಧರ್ಮ ಗುರುಗಳಾಗಿ ಹಾಗೂ ಚರ್ಚ್ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾರವರು ದಿವ್ಯ ಬಲಿಪೂಜೆಯನ್ನು ನಡೆಸುವ ಮುಖಾಂತರ ಕ್ರೈಸ್ತ ಶಿಕ್ಷಣ ದಿನಕ್ಕೆ ಚಾಲನೆ ನೀಡಿದರು.
ಪೂಜೆಯ ಬಳಿಕ ಎಲ್ಲಾ ವಿದ್ಯಾರ್ಥಿಗಳು ಬೈಬಲ್ ಆಧಾರಿತ ಕಿರು ನಾಟಕ ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಕ್ರೈಸ್ತ ಶಿಕ್ಷಣದಲ್ಲಿ ಪ್ರಥಮ ಮತ್ತು ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಮಂಗಳಜ್ಯೋತಿ ಸಂಸ್ಥೆಯು ನಡೆಸುವ ಏಳನೇ ತರಗತಿ ವಿದ್ಯಾರ್ಥಿಗಳ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಕ್ರಿಶಾ ವಿಯಾನ್ನಾ ಡಾಯಾಸ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಫಾತಿಮಾ ವಾರ್ಡಿನ ಗುರಿಕಾರ ತೊಮಸ್ ಲಸ್ರಾದೊ ಮತ್ತು ಅವರ ಪತ್ನಿ ಜೋಸ್ಪಿನ್ ಲಸ್ರಾದೊ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಚರ್ಚ್ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾ, ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಕ್ರೈಸ್ತ ಶಿಕ್ಷಣ ಸಂಯೋಜಕಿ ರೀಷಲ್ ಎವಿಟಾ ಪಿಂಟೊ ಹಾಗೂ ಶಿಕ್ಷಕಿ ಅನಿತಾ ನೋಯೆಲ್ ವೇಗಸ್ ಉಪಸ್ಥಿತರಿದ್ದರು. ವೈ.ಸಿ.ಎಸ್. ವಿದ್ಯಾರ್ಥಿಗಳಾದ ವಿನಿಶಾ ಡಾಯಾಸ್ ಹಾಗೂ ಲವೀಶಾ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಕಿರಣ್ ಫೆರ್ನಾಂಡಿಸ್ ವಂದನಾರ್ಪಣೆಗೈದರು.