ಮಂಜೇಶ್ವರ: ಅರಿಬೈಲು ಕೆದುಮನೆ ನಿವಾಸಿ ಧಾರ್ಮಿಕ ಮುಂದಾಳು ಜಯಂತ ಮೇಸ್ತ್ರಿ [82] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಕೃಷಿಕರಾಗಿದ್ದ ಇವರು ನಾಗ ಬ್ರಹ್ಮ ಯುವಕ ಮಂಡಲ ಅರಿಬೈಲು, ಕಾಸರಗೋಡು ತಾಲೂಕು ಕುಲಾಲ ಸಂಘ, ಬಂಗೇರ ಮೂಲ ಸ್ಥಾನ ಪಾವೂರು ಪಾಲೆದಡಿ ಮಂಜೇಶ್ವರ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮೋಹಿನಿ ಮಕ್ಕಳಾದ ಲತಾ, ವಿಶ್ವನಾಥ, ಸುರೇಶ್, ಅಳಿಯ ಮನೋಹರ್, ಸೊಸೆಯಂದಿರಾದ ಮಮತ, ರಾಜೇಶ್ವರಿ, ಸಹೋದರ ನಾರಾಯಣ ಬಂಗೇರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಾಸರಗೋಡು ಜಿಲ್ಲಾ ಕುಲಾಲ ಸಂಘ ತೀವ್ರ ಸಂತಾಪ ಸೂಚಿಸಿದೆ.