ಕಾಸರಗೋಡು: ಪಿಕಪ್ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾವನ್ನು ಅಬಕಾರಿ ದಳದ ವಿಶೇಷ ತಂಡ ಪೆರ್ಲದಿಂದ ವಶ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಕುಂಬಳೆ ಶಾಂತಿಪಳ್ಳ ದ ಶಹೀನ್ ರಹೀಂ(36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್(32) ಬಂಧಿತ ಆರೋಪಿಗಳು. ಅಬಕಾರಿ ದಳದ ಸಿಬ್ಬಂದಿ ಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಪಿಕಪ್ ವ್ಯಾನ್ ಅನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 107 ಕಿಲೋ ಗಾಂಜಾ ಪತ್ತೆಯಾಗಿದೆ.
ಇನ್ನು ಯಾರಿಗೂ ಸಂಶಯ ಬಾರದಂತೆ ಬಚ್ಚಿಟ್ಟು ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಈ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ.