ಉಡುಪಿ: ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ಸಂದರ್ಭದಲ್ಲಿ ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ದೇಶದ್ರೋಹಿ ಮುಖವಾಡ ಬಯಲಾಗಿದೆ, ಚುನಾವಣಾ ಆಯೋಗ ತಕ್ಷಣ ನಾಸೀರ್ ಹುಸೇನ್ ರಾಜ್ಯ ಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗೆಲುವು ರಾಷ್ಟ್ರಪ್ರೇಮಿಗಳ ಪಾಲಿನ ಸೋಲು ಎಂಬುದನ್ನು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷದಿಂದ ದೇಶ ಪ್ರೇಮದ ಚಿಂತನೆ ನಿರೀಕ್ಷೆ ಮಾಡುವುದೇ ಮೂರ್ಖತನವಾಗಿದೆ.
ಕಾಂಗ್ರೆಸ್ ಕಿಡಿಗೇಡಿಗಳ ಈ ಮನಸ್ಥಿತಿ ದೇಶದ ಜನತೆಯಲ್ಲಿ ಆತಂಕ ಮೂಡಿಸಿದೆ. ಕಾಂಗ್ರೆಸ್ ಮುಖಂಡರು ತಕ್ಷಣ ಈ ಘಟನೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಬೇಕು.
ಕಿಡಿಗೇಡಿಗಳ ವಿರುದ್ಧ ಸರ್ಕಾರ ದೇಶದ್ರೋಹದ ಪ್ರಕರಣದಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.