ಕಾಸರಗೋಡು: ಕವಿ, ಕುಶಲ ಕರ್ಮಿ ಮೌನೇಶ್ ಆಚಾರ್ಯ ಕಡಂಬಾರುವರ ಕರದಲ್ಲಿ ಊದು ಕಡ್ಡಿಯಿಂದ ರಚಿತಗೊಂಡ ಕಣಿಪುರೇಶ

Share with

ಕಾಸರಗೋಡು: ಕುಂಬಳೆ ಸೀಮೆಯ ಒಡೆಯ ಕಣಿಪುರೇಶನಿಗಿಂದು ಬ್ರಹ್ಮಕಲಶೋತ್ಸವದ ಪುಳಕ, ಕೃತಾರ್ಥ ವಾತಾವರಣದಲ್ಲಿ ನೋಡುಗರ ಕಣ್ಣಿಗೆ ವೈವಿಧ್ಯತೆಯನ್ನು ಮೆರೆಸುವ ಕಣಿಪುರೇಶ ಭಕ್ತಿ ಭಾವೈಕ್ಯತೆ ಭಕ್ತರಿಗೆ ಒಲಿಯುವ ಕಾರುಣ್ಯಮೂರ್ತಿ. ಆದ್ದರಿಂದಲೇ ಇಲ್ಲಿನ ಕೃಷ್ಣ ವಿಗ್ರಹವನ್ನು ತಮ್ಮ ಕಲಾ ನೈಪುಣ್ಯತೆಯಿಂದ ಸೃಷ್ಠಿಸಿ ಕೃಷ್ಣಾನುಗ್ರಹಕ್ಕೆ ಪಾತ್ರರಾಗುತ್ತಾರೆ.

ಕಲಾವಿದ ಮೌನೇಶ್ ಆಚಾರ್ಯ. ಇವರು ಉರಿಸಿದ ಊದು ಬತ್ತಿಯ ಉಳಿದ ಕಡ್ಡಿಯಿಂದ ಕೃಷ್ಣನ ನಿರ್ಮಿಸಿ ಕಲಾತ್ಮಕತೆ ಮೆರೆದಿದ್ದಾರೆ.

ಇಂತಹ ಸುಸಂದರ್ಭದಲ್ಲಿ ಹಲವು ಕಲಾವಿದರು ತಮ್ಮ ಸೂಕ್ಷ್ಮ ಚಕ್ಷುಗಳಿಂದ ಕೃಷ್ಣನ ಚಿತ್ರಿಸಿ ಸೋಜಿಗವನ್ನು ತೆರದಿಡುವವರಲ್ಲಿ ಒರ್ವರಾಗಿದ್ದಾರೆ ಕಡಂಬಾರು ನಿವಾಸಿ ಕವಿ, ಕಲಾವಿದ ಮೌನೇಶ್ ಆಚಾರ್ಯ. ಇವರು ಉರಿಸಿದ ಊದು ಬತ್ತಿಯ ಉಳಿದ ಕಡ್ಡಿಯಿಂದ ಕೃಷ್ಣನ ನಿರ್ಮಿಸಿ ಕಲಾತ್ಮಕತೆ ಮೆರೆದಿದ್ದಾರೆ.

ತಾಳ್ಮೆ, ಸೂಕ್ಷ್ಮತೆ ಹಾಗೂ ಕೈಚಳಕ ಇದ್ದರೆ ಕೈ ಹಿಡಿದ ಕೆಲಸವನ್ನು ಅತ್ಯಂತ ನಯ ನಾಜೂಕಾಗಿ ಪರಿವರ್ತಿಸಬಹುದೆಂಬುದಕ್ಕೆ ಮಾದರಿಯಾಗುವ ಮೌನೇಶ್ ಆಚಾರ್ಯರು ಈ ಬಾರಿ ಕಣಿಪುರ ಶ್ರೀಗೋಪಾಲಕೃಷ್ಣನ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಅನುಯೋಗ್ಯವಾಗಿ ನಿರ್ಮಿಸಿದ ಈ ಕಡ್ಡಿ ವಿಗ್ರಹ ಕಲಾವಿದನ ಚಾಕಚಕ್ಯತೆಗೊಂದು ದೃಷ್ಠಾಂತವಾಗಿದೆ.

ಸ್ವತಃ ಅಕ್ಕಸಾಲಿಗ ವೃತ್ತಿಯಲ್ಲಿ ಕುಶಲಕರ್ಮಿಗಳಾಗಿರುವ ಮೌನೇಶ್ ಆಚಾರ್ಯರು ಕವಿಗಳಾಗಿಯೂ ಸಾಹಿತ್ಯ ವಲಯದಲ್ಲಿ ಸುಪರಿಚಿತರು. ಈ ಹಿಂದೆ ಆಯೋಧ್ಯೆ,ಶಬರಿಮಲೆ ಸನ್ನಿಧಾನ ಮೊದಲಾದ ವೈವಿಧ್ಯಮಯ ಕೃತಿಗಳನ್ನು ರಚಿಸಿದ ಮೌನೇಶ್ ಅವರು ಸಂದರ್ಭೋಚಿತವಾಗಿ ಕಲೆಯನ್ನು ಬಳಸಿಕೊಂಡು ಜನಪ್ರಿಯರಾಗುವಲ್ಲಿ ಸ್ವಯಂ ಸಾಧಕರಾಗಿದ್ದಾರೆ.


Share with

Leave a Reply

Your email address will not be published. Required fields are marked *