ಪೈವಳಿಕೆ: ಗಡಿನಾಡು ಕಾಸರಗೋಡಿನ ಅತ್ಯಂತ ಹಳೆಯ ಕನ್ನಡ ಮಾಧ್ಯಮ ಶಾಲೆ ಸರಕಾರಿ ಉನ್ನತ ಪ್ರೌಢಶಾಲೆ ಕಾಯರ್ ಕಟ್ಟೆ ಶಾಲೆಗೆ ಕೇರಳ ಸರಕಾರದ ವಿದ್ಯಾ ಕಿರಣ ಯೋಜನೆಯಡಿ ಕೇರಳ ಸರಕಾರ ಕಿಫ್ಬೀ, ಕಿಲಾ ಅನುದಾನದಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ನೂತನ ಕಟ್ಟಡದ ಉದ್ಘಾಟನೆಯನ್ನು ಆನ್ಲೈನ್ ಮೂಲಕ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರು ಉದ್ಘಾಟಿಸಿದರು.
ಶಿಕ್ಷಣ ಸಚಿವರಾದ ಶ್ರೀ ವಿ ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು. ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತ ಅಧ್ಯಕ್ಷೆ ಜಯಂತಿ ಕೆ ಅಧ್ಯಕ್ಷತೆ ವಹಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಮೀನಾ ಟೀಚರ್ ಶಿಲಾಫಲಕವನ್ನು ಅನಾವರಣಗೊಳಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್ ಎನ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಪೈವಳಿಕೆ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಬ್ದುಲ್ ರಜಾಕ್ ಚಿಪ್ಪಾರ್, ಜಡ್ ಎ ಕಯ್ಯಾರ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮರ‍್ತಿ, ಪಂಚಾಯತ್ ಸದಸ್ಯರಾದ ರಹಮತ್ ರಹಮಾನ್, ಶ್ರೀನಿವಾಸ ಭಂಡಾರಿ,ಅಬ್ದುಲ್ಲಾ ಹಾಗೂ ಶಾಲಾ ಪಿಟಿಎ ಅಧ್ಯಕ್ಷ ಸಿದ್ದೀಕ್ ಬಾಯರ್, ನಿವೃತ್ತ ಡಿಡಿಇ ಶ್ರೀನಿವಾಸನ್, ಕಾಯರ್ ಕಟ್ಟೆ ಎಲ್ ಪಿ ಶಾಲೆ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್, ಎಸ್ ಎಮ್ ಸಿ ಅಧ್ಯಕ್ಷ ಉಸ್ಮಾನ್, ಶಾಲಾ ಕ್ರಿಯಾ ಸಮಿತಿ ಸಂಚಾಲಕ ಅಸೀಸ್ ಕಳಾಯಿ, ಅಜಿತ್ ಎಮ್ ಸಿ ಲಾಲ್ ಬಾಗ್, ಶ್ರೀ ಕೃಷ್ಣ ಭಟ್ ಮೊದಲಾದವರು ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ರಾಜೇಂದ್ರ ಕುಮಾರ್ ಸ್ವಾಗತಿಸಿ, ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ್ ಕುಮಾರ್.ಬಿ ವಂದಿಸಿದರು.