ಇತಿಹಾಸ ಪ್ರಸಿದ್ದ ನಿಡಿಗಲ್ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಯಶೋಧರ ಗೌಡ ಗುರಿಪಳ್ಳ ಆಯ್ಕೆ

Share with

ಕನ್ಯಾಡಿ: ಸತ್ಯನಾಪುರದ ಸತ್ಯೊದ‌ ಸಿರಿಗಳ ಮೂಲ ಆಲಡೆ ಕ್ಷೇತ್ರ ಶ್ರೀ ಲೋಕನಾಥೇಶ್ವರ ದೇವಸ್ಥಾನ ಕನ್ಯಾಡಿ-ನಿಡಿಗಲ್ ಇದರ ಈ ವರ್ಷದ ಜಾತ್ರಾ ಮಹೋತ್ಸವವು ದಿನಾಂಕ ಮಾ.23ರಿಂದ 27ರವರೆಗೆ ನಡೆಯಲಿದ್ದು ಈ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯೂ ಫೆ.28ರಂದುದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯವರಾದ ಶ್ರೀನಿವಾಸ್ ಡಿಪಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಡ್ವಾಲ್‌ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಯಶೋಧರ ಗೌಡ ಕೊಡ್ಡೋಲು, ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿ ಗುರಿಪಳ್ಳ, ಕೋಶಾಧಿಕಾರಿಯಾಗಿ ಸಂತೋಷ್ ಗೌಡ ಗೋಳಿದೊಟ್ಟು

ಈ ವರ್ಷದ ನಡ್ವಾಲ್‌ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಮಾಜಿ ವ್ಯವಸ್ಥಾಪನಾ ಸಮಿತಿ‌ ಸದಸ್ಯರಾದ ಯಶೋಧರ ಗೌಡ ಕೊಡ್ಡೋಲು ಇವರು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿ ಗುರಿಪಳ್ಳ, ಕೋಶಾಧಿಕಾರಿಯಾಗಿ ಸಂತೋಷ್ ಗೌಡ ಗೋಳಿದೊಟ್ಟು ಇವರು ಆಯ್ಕೆಯಾದರು.

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಜಯಂತ ಗೌಡ, ಸುಂದರ ಪೂಜಾರಿ, ಅರ್ಚಕರಾದ ಕೃಷ್ಣಮೂರ್ತಿ ಹೊಳ್ಳ, ನೀಲಯ್ಯ ಪೂಜಾರಿ, ದಿವಾಕರ ಏಣೀರು, ಪ್ರವೀಣ್ ವಿ.ಜಿ, ಪ್ರಸಾದ್ ಕುಮಾರ್, ನಾಣ್ಯಪ್ಪ ಪೂಜಾರಿ, ಭದ್ರಯ್ಯ ಪೂಜಾರಿ ಹಾಗೂ ಊರವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *