ಕಲ್ಲಡ್ಕ: ಶಿಕ್ಷಕರು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದಾರೆ: ಪ್ರತಿಮಾ

Share with

ಕಲ್ಲಡ್ಕ: ಶಿಕ್ಷಕನು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದು ತನ್ನ ಬದುಕಿನುದ್ದಕ್ಕೂ ಕನ್ನಡಿಯಂತೆ ವ್ಯಕ್ತಿತ್ವವನ್ನು ಹೊಂದಿರುವಂತೆ ಇರಬೇಕಾಗುತ್ತದೆ, ಶಿಕ್ಷಕನ ವೃತ್ತಿ ಧರ್ಮವು ಸೇವೆಯ ರೂಪದಲ್ಲಿದ್ದು ದೇಶದ ಭವಿಷ್ಯವನ್ನು ನಿರ್ಮಿಸುವ ಒಬ್ಬ ಆದರ್ಶ ಮಾದರಿ ವ್ಯಕ್ತಿತ್ವವನ್ನು ಹೊಂದಿರಬೇಕಾಗುತ್ತದೆ.

ಮಜಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹಾಗೂ ಕೆಲಿಂಜ ಶಾಲೆಯ ನಿವೃತ್ತ ಸಹಶಿಕ್ಷಕಿ ಗಾಯತ್ರಿ ದೇವಿ ಇವರನ್ನು ಸನ್ಮಾನಿಸಲಾಯಿತು.

ತನ್ನ ಉತ್ತಮ ನಡತೆ, ನಿಷ್ಪಕ್ಷಪಾತ ಸೇವೆ, ಶಾಲೆಯ ಅಭಿವೃದ್ಧಿ, ಮಕ್ಕಳ ಮಾದರಿ ಶಿಕ್ಷಕನಾಗಿ ಇದ್ದಾಗ ಮಾತ್ರ ಸೇವೆಯಲ್ಲಿ ಸಂಪೂರ್ಣತೆಯನ್ನು ಪಡೆಯಲು ಸಾಧ್ಯ ಎಂದು ಬಂಟ್ವಾಳ ತಾಲೂಕು ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕ ಪ್ರತಿಮಾರವರು ಹೇಳಿದರು.

ಅವರು ಮಾ.2ರಂದು ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ನಡೆದ ಗುರುವಂದನಾ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತುಗಳನ್ನು ಮಾಡಿದರು.

ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟನೆ

ಕಾರ್ಯಕ್ರಮದಲ್ಲಿ ಕಲ್ಲಡ್ಕ ಕ್ಲಸ್ಟರ್ ನಲ್ಲಿ ಈ ವರ್ಷ್ ದಲ್ಲಿ ನಿವೃತರಾದ ಮಜಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹಾಗೂ ಕೆಲಿಂಜ ಶಾಲೆಯ ನಿವೃತ್ತ ಸಹಶಿಕ್ಷಕಿ ಗಾಯತ್ರಿ ದೇವಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಹಾಗೂ ಕಲ್ಲಡ್ಕ ಕ್ಲಸ್ಟರಿನ ಶಾಲೆಗಳ ಶಿಕ್ಷಕರು ಹಾಜರಿದ್ದರು. ಶಿಕ್ಷಕಿಯರಾದ ಶಕುಂತಲಾ ಮತ್ತು ಅನುಷಾ ಪ್ರಾರ್ಥಿಸಿ ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟ ಆಗ್ನೆಸ್ ಮಂಡೋನ್ಸಾ ಧನ್ಯವಾದವಿತ್ತರು, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *