ಕಾಸರಗೋಡು: ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಮಾ.8ಕ್ಕೆ ಶಿವರಾತ್ರಿ ಉತ್ಸವ

Share with

ಕಾಸರಗೋಡು: ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾರ್ಷಿಕ ಶಿವರಾತ್ರಿ ಮಹೋತ್ಸವ ಮಾ.8ರಂದು ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾರ್ಷಿಕ ಶಿವರಾತ್ರಿ ಮಹೋತ್ಸವ

ಇದರ ಅಂಗವಾಗಿ ಮಾ.8ಕ್ಕೆ ಬೆಳಗ್ಗೆ 7 ಗಂಟೆಗೆ ಉಷಃಪೂಜೆ, 8 ಗಂಟೆಗೆ ನವಕಾಭಿಷೇಕ, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ವಿವಿಧ ಭಜನಾ ಸಂಘಗಳ ಭಜನಾ ಸಂಕೀರ್ತನೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ 6 ಗಂಟೆಯಿಂದ ಶಿವಪಂಚಾಕ್ಷರಿ ಜಪ, ರಾತ್ರಿ 7 ಗಂಟೆಯಿಂದ ಪೂಜೆ, ಉತ್ಸವ ಬಲಿ, ರಾಜಾಂಗಣ ಪ್ರಸಾದ ಜರಗಲಿದೆ.


Share with

Leave a Reply

Your email address will not be published. Required fields are marked *