ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಗಳ ಗ್ರಾಮೀಣ ಪ್ರದೇಶದಲ್ಲಿ ಕೆಟ್ಟುಹೋದ ಬೀದಿ ದೀಪ; ದುರಸ್ಥಿಗೆ ಕ್ರಮಯಿಲ್ಲದೆ ಊರವರಲ್ಲಿ ಆತಂಕ ಸೃಷ್ಟಿ

Share with

ಪೈವಳಿಕೆ: ಬೀದಿ ದೀಪ ಅಳವಿಡಿಸಿದರೂ ಉರಿಯದೆ ಉಪಯೋಗ ಶೂನ್ಯಗೊಂಡಿದ್ದು, ದುರಸ್ಥಿಗೆ ಕ್ರಮಯಿಲ್ಲದೆ ಸ್ಥಳೀಯರು ಸಮಸ್ಯೆಗೀಡಾಗಿದ್ದಾರೆ.

ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಗಳ ಗ್ರಾಮೀಣ ಪ್ರದೇಶದಲ್ಲಿ ಕೆಟ್ಟುಹೋದ ಬೀದಿ ದೀಪ

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಬೀದಿ ದೀಪಗಳು ಕೆಟ್ಟುಹೋಗಿ ಪ್ರದೇಶ ಕತ್ತಲಮಯವಾಗಿದ್ದು, ಇದರಿಂದ ಊರವರು ನಡೆದಾಡಲು ಆತಂಕ ಪಡುತ್ತಿದ್ದಾರೆ.

ಬೆರಿಪದವ್, ಬಳ್ಳೂರು ವೆರ್ವೋಡಿ ಸಹಿತ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪ ಕೆಟ್ಟು ಹೋಗಿರುವುದಾಗಿ ಊರವರು ತಿಳಿಸಿದ್ದಾರೆ. ರಾತ್ರಿ ಹೊತ್ತಲ್ಲಿ ಕತ್ತಲು ಆವರಿಸಿಕೊಂಡಿರುವುದರಿಂದ ರಾತ್ರಿ ಕಾಲ ಸಂಚಾರಕ್ಕೆ ಆತಂಕಗೊಳ್ಳುತ್ತಿದ್ದಾರೆ.

ಹಂದಿ ಸಹಿತ ಕಾಡು ಪ್ರಾಣಿ, ವಿಷ ಜಂತು ರಸ್ತೆಯಲ್ಲಿ ಸಂಚರಿಸುವುದು ವ್ಯಾಪಕಗೊಂಡಿದ್ದು, ಸಂಚಾರ ಭೀತಿಗೆ ಕಾರಣವಾಗಿದೆ. ದೀಪವನ್ನು ದುರಸ್ಥಿಗೊಳಿಸಿದರೂ ಅದು ಕೆಲವೇ ದಿನಗಳಲ್ಲಿ ಕೆಟ್ಟುಹೋಗುತ್ತಿದ್ದು, ಕಳಪೆ ಮಟ್ಟದ ಸಾಮಾಗ್ರಿಗಳನ್ನು ಅಳವಡಿಸಲಾಗುತ್ತಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯವೆಂದು ಆರೋಪಿಸಲಾಗಿದೆ.

7ನೇ ವಾರ್ಡ್ ಸದಸ್ಯೆ ಜಯಲಕ್ಷ್ಮಿ ಭಟ್ ಪಂಚಾಯತ್‌ನಲ್ಲಿ ಇತ್ತೀಚೆಗೆ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಬೀದಿ ದೀಪ ದುರಸ್ಥಿಗೊಳಿಸಲು ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ. ಕೂಡಲೇ ದೀಪ ದುರಸ್ಥಿಗೊಳಿಸುವ ಕ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *